ಶಹಾಪುರ ನ್ಯಾಯಾಲಯಕ್ಕೆ ಪ್ರಧಾನ ಸೇಷನ್ಸ್ ನ್ಯಾಯಾಽÃಶ ಮರಳಸಿದ್ಧಾರಾಧ್ಯ ಎಚ್.ಜಿ. ಭೇಟಿ ನೀಡಿ ರಾಷ್ಟಿçÃಯ ಲೋಕ ಅದಾಲತ್ ಬಗ್ಗೆ ಪರಿಶೀಲಿಸಿದರು. ನ್ಯಾಯಾಽÃಶರಾದ ಹೇಮಾ ಪಸ್ತಾಪುರ, ಸುಪ್ರಿಯಾ ನವಲಿ ಇತರರಿದ್ದರು.
ಶಹಾಪುರ :ಇಲ್ಲಿನ ಮೂರು ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟಿçÃಯ ಲೋಕ ಅದಾಲತ್‌ನಲ್ಲಿ ವಿವಿಧ ಸ್ವರೂಪದ ೨,೯೭೫ ಪ್ರಕರಣಗಳನ್ನು ಹಾಗೂ ೧.೬೧ಕೋಟಿ ರೂ. ಮೊತ್ತವನ್ನು ವಸೂಲಾತಿಯ ಹೊಂದಾಣಿಕೆ ಮಾಡಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಹಾಗೂ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಽÃಶೆ ಹೇಮಾ ಪಸ್ತಾಪುರ ತಿಳಿಸಿದರು.
ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ವಿವಿಧ ಸ್ವರೂಪದ ೫೮೮ ಪ್ರಕರಣ ಹಾಗೂ ೧.೨೨ ಕೋಟಿ ರೂ. ಮೊತ್ತವನ್ನು ವಸೂಲಾತಿಯ ಹೊಂದಾಣಿಕೆ ಮಾಡಿದೆ. ಅದರಂತೆ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಽÃಶೆ ಸುಪ್ರಿಯಾ ನವಲಿ ಅವರು, ೧,೩೬೭ ಪ್ರಕರಣ ಹಾಗೂ ೩೮ ಲಕ್ಷ ಹಾಗೂ ಹೆಚ್ಚುವರಿ ನ್ಯಾಯಾಲಯದ ೧,೦೨೦ ಹಾಗೂ ೪೯ ಸಾವಿರ ಮೊತ್ತವನ್ನು ವಸೂಲಾತಿ ಮಾಡಿದೆ ಎಂದು ಅವರು ಮಾಹಿತಿ ನೀಡಿದರು.
ರಾಷ್ಟಿçÃಯ ಲೋಕ ಅದಾಲತ್ ಕಕ್ಷಿದಾರರಿಗೆ ಹೆಚ್ಚಿನ ಅನುಕೂಲವಾಗಿದ್ದು, ಪರಸ್ಪರ ಸಂಧಾನದ ಮೂಲಕ ತಮ್ಮ ಸಮಸ್ಯೆ ರಾಜಿ ಮಾಡಿಕೊಂಡರೆ ಸಮಯ ಉಳಿತಾಯವಾಗುವುದಿಲ್ಲದೆ, ಮಾನಸಿನ ನೆಮ್ಮದಿ, ಕೊನೆಯವರೆಗೆ ಪ್ರೀತಿ ಬಾಂಧವ್ಯ ಉಭಯ ಕಕ್ಷಿಗಾರರಲ್ಲಿ ಉಳಿಯುತ್ತದೆ. ವ್ಯಾಜ್ಯ ರಹಿತ ಸಮಾಜ ನಿರ್ಮಾಣ ಅದಾಲತ್‌ನ ಪ್ರಮುಖ ಧ್ಯೇಯವಾಗಿದೆ ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕಿ ದಿವ್ಯಾರಾಣಿ ನಾಯಕ ಸುರಪುರ, ವಕೀಲರ ಸಂಘ ಅಧ್ಯಕ್ಷ ಯೂಸೂ-ï ಸಿದ್ದಿಕಿ, ಪ್ರದಾನ ಶಿರಸ್ತೇದಾರ ಪ್ರಕಾಶ ಪಾಟೀಲ್, ಮಲ್ಲಣ್ಣ ಮಡಿವಾಳಕರ್, ಅಯ್ಯಣ್ಣ ಮಕಾಶಿ, ಅನಿಲರಾಜ್ ಹಾಗೂ ವಕೀಲರ ಸಂಘದ ಹಿರಿಯ ಕಿರಿಯ ಸದಸ್ಯರು, ವಿವಿಧ ಬ್ಯಾಂಕ್ ಅಽಕಾರಿಗಳಿದ್ದರು.