

ಪ್ರಮುಖ ಮುಖ್ಯಾಂಶಗಳು
ಇದ್ದಲಗಿಯಲ್ಲಿ ಆಗಬಾರದ ಘಟನೆ ಆಗಿ ಹೋಗಿದೆ. ಆದರೆ, ಯಾರೂ ಕೂಡ ಧೈರ್ಯ ಕಳೆದುಕೊಳ್ಳಬೇಡಿ. ನಿಮ್ಮೊಂದಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಇದ್ದೇವೆ. ಘಟನೆಯಲ್ಲಿ ಹಣ, ವಸ್ತ್ರ, ಒಡವೆ, ದವಸ-ಧಾನ್ಯ ಎಲ್ಲವನ್ನು ಕಳೆದುಕೊಂಡಿದ್ದೀರಿ. ಬಹಳ ನೋವಿನ ಸಂಗತಿ. ತಕ್ಷಣಕ್ಕೆ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಶಪ್ಪನವರ ಜತೆ ಸೇರಿ ಸಭೆ ನಡೆಸಿ, ಪರಿಹಾರ ಕಂಡುಕೊಳ್ಳಲಾಗುವುದು. ಏನೆಲ್ಲ ಮಾಡಬೇಕು, ಅದನ್ನು ಪ್ರಮಾಣಿಕವಾಗಿ ಸರ್ಕಾರದಿಂದ ಹಾಗೂ ಸರ್ಕಾರದ ಹೊರಗಿನಿಂದಲೂ ಮಾಡಲಾಗುವುದು.
ಪಿ.ಸಿ.ಗದ್ದಿಗೌಡರ ಸಂಸದರುಬಾಗಲಕೋಟೆ.
ಇದ್ದಲಗಿ ಗ್ರಾಮದಲ್ಲಿ ಶಿಥಿಲಗೊಂಡಿದ್ದ ಶೆಡ್‌ಗಳ ನವೀಕರಿಸಲು ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ನಮ್ಮ ಬಳಿ 50 ಲಕ್ಷ ರೂ. ಅನುದಾನವೂ ಇದೆ. ಅಷ್ಟರಲ್ಲಿ ಅಗ್ನಿ ದುರಂತ ಸಂಭವಿಸಿದೆ. ಈಗ ಸುಟ್ಟು ಹೋಗಿರುವ ಶೆಡ್ ನಿರ್ಮಾಣ ಮಾಡಲಾಗುವುದು. ಅಲ್ಲಿ ಒಟ್ಟು 250 ಶೆಡ್‌ಗಳು ಇದ್ದು, ಅವುಗಳೆಲ್ಲವನ್ನು ಹೊಸದಾಗಿ ನಿರ್ಮಾಣ ಮಾಡಲು ಅಂದಾಜು 7 ರಿಂದ 8 ಕೋಟಿ ರೂ. ಅನುದಾನ ಕೋರಿ ಜಲಸಂಪನ್ಮೂಲ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರಾಮದಲ್ಲಿ ಜಿಲ್ಲಾ ಆಡಳಿತ ಮತ್ತು ಗ್ರಾಪಂ ವತಿಯಿಂದ ಕಾಳಜಿ ಕೇಂದ್ರ ಹಾಗೂ ವಸತಿಗೆ ವ್ಯವಸ್ಥೆ ಮಾಡಲಾಗಿದೆ.
ಗಜಾನನ ಬಾಲೆ ಜಿಪಂ ಸಿಇಒ ಹಾಗೂ ಆರ್ ಆ್ಯಂಡ್ ಆರ್ ಪ್ರಭಾರ ಪ್ರಧಾನ ವ್ಯವಸ್ಥಾಪಕರು, ಬಾಗಲಕೋಟೆ.
ಇದ್ದಲಗಿ ಗ್ರಾಮದಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಕಿ ಹೇಗೆ ಹತ್ತಿಕೊಂಡಿತು ಎನ್ನುವ ನಿಖರ ಮಾಹಿತಿ ನೀಡಲು ತಂಡ ನೇಮಿಸಲಾಗಿದೆ. ಶೆಡ್‌ಗಳು ಸುಟ್ಟಿರುವುದರಿಂದ ಸಾಕಷ್ಟು ಹಾನಿಯಾಗಿದ್ದು, ಏನೆಲ್ಲ ಹಾನಿಯಾಗಿದೆ ಎಂದು ಕಂದಾಯ, ಪೊಲೀಸ್, ಪಂಚಾಯಿತಿ ಅಧಿಕಾರಿಗಳು ಸರ್ವೆ ಮಾಡಿ ವರದಿ ನೀಡಲು ಸೂಚಿಸಲಾಗಿದೆ. ಸದ್ಯಕ್ಕೆ ಸಂತ್ರಸ್ತರಿಗೆ ಕಾಳಜಿ ಕೇಂದ್ರ ಹಾಗೂ ವಸತಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಸಂಗಪ್ಪ ಜಿಲ್ಲಾಧಿಕಾರಿ ಬಾಗಲಕೋಟೆ.