208 ಕ್ವಿಂಟಾಲ್​ ಪಡಿತರ ಅಕ್ಕಿ, 800 ಕೆಜಿ ರಾಗಿ ವಶ / DODABALLAPUR

ದೊಡ್ಡಬಳ್ಳಾಪುರದ ಪ್ರಿಯದರ್ಶನಿ ಬಡಾವಣೆಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಅಕ್ಕಿಯನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು.
ದೊಡ್ಡಬಳ್ಳಾಪುರದ ಪ್ರಿಯದರ್ಶನಿ ಬಡಾವಣೆಯ ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಅಕ್ಕಿಯನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು.
Published on
ದೊಡ್ಡಬಳ್ಳಾಪುರ : ಆಹಾರ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​. ಮುನಿಯಪ್ಪ ಅವರ ಜಿಲ್ಲೆಯಲ್ಲಿ ಬಡವರಿಗೆ ನೀಡಬೇಕಿದ್ದ ಪಡಿತರ ಅಕ್ಕಿ, ರಾಗಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ.
ಎಪಿಎಂಸಿ ಎದುರಿನ ಪಾಲನಜೋಗಿಹಳ್ಳಿಯ 1ನೇ ಕ್ರಾಸ್​ ಪ್ರಿಯದರ್ಶಿನಿ ಬಡಾವಣೆಯ ಗೋದಾಮಿನಲ್ಲಿ
ಅಕ್ರಮವಾಗಿ ಶೇಖರಿಸಿಟ್ಟಿದ್ದ 208 ಕ್ವಿಂಟಾಲ್​ ಅಕ್ಕಿ, 8 ಕ್ವಿಂಟಾಲ್​ ರಾಗಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್​ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡು ಗೋದಾಮಿಗೆ ಬೀಗ ಜಡಿದಿದ್ದಾರೆ.
ಬಡವರಿಗೆ ನೀಡಬೇಕಾಗದ ಅಕ್ಕಿಯನ್ನು ಅಂಗಡಿ ಮಾಲೀಕ ಹರೀಶ್​ ಅಕ್ರಮವಾಗಿ ಸಂಗ್ರಹಿಸಿ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಸರ್ಕಾರಕ್ಕೆ ಧೋಖಾ ಮಾಡಿದ್ದಾರೆ ಎಂದು ಆಹಾರ ಇಲಾಖೆಗೆ ದೂರು ಬಂದಿತ್ತು. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಅಕ್ಕಿ ಮತ್ತು ರಾಗಿ ಅಕ್ರಮ ಸಂಗ್ರಹದ ಕುರಿತು ಆಹಾರ ಇಲಾಖೆ ಶಿರಸ್ತೇದಾರ್​ ವರದಿ ನೀಡಿದ್ದಾರೆ. ಅಲ್ಲದೆ, ಪೊಲೀಸ್​ ಇಲಾಖೆಗೆ ದೂರು ನೀಡಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಸೋರಿಕೆಗೆ ಮುಂದಿನ ದಿನಗಳಲ್ಲಿ ಕಡಿವಾಣ ಹಾಕಲಾಗುವುದು.

— > ಮಲ್ಲಪ್ಪ ಕೆ. ಯರಗೋಳ ತಹಸೀಲ್ದಾರ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net