ಜು.25ರಂದು ಆಷಾಢ ಏಕಾದಶಿ ಪ್ರಯುಕ್ತ ದೇವಾಲಯದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ, ವಿಷ್ಣುನಾಮ ಪಾರಾಯಣ, ವಿಶೇಷ ಹೂವಿನ, ಆಭರಣಗಳಿಂದ ಸಿಂಗಾರ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ. ಅನುಜ್ಞೆ, ಸ್ವಸ್ತಿವಾಚನ, ವಿಷ್ವಕ್ಸೇನ ಆರಾಧನೆ, ಭಗವದ್ ವಾಸುದೇವ ಪುಣ್ಯಾಹ ವಾಚನ, ರಕ್ಷಾಬಂಧನ, ಕಳಸಾರಾಧನೆ, ಅಗ್ನಿಪ್ರತಿಷ್ಠೆ, ನರಸಿಂಹ, ಪ್ರಧಾನ ಹೋಮ, ಪರಿವಾರ ಹೋಮ, ಅಷ್ಟಲಕ್ಷ್ಮೀ, ಶಾಂತಿ, ಶ್ರೀ ಲಕ್ಷ್ಮೀನರಸಿಂಹ, ಮೃತ್ಯುಂಜಯ, ಧನ್ವಂತರಿ ಹೋಮ ಸೇರಿ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ನಡೆಯಲಿವೆ ಎಂದು ದೇವಾಲಯದ ಧರ್ಮದರ್ಶಿ ಜಯರಾಮ್ ತಿಳಿಸಿದ್ದಾರೆ.