19594 ಮತದಾರರು ಅನರ್ಹ

19594 voters are ineligible
19594 voters are ineligible
Published on

ಬಾಗೇಪಲ್ಲಿ:

ರಾಜ್ಯದ ಇತಿಹಾಸದಲ್ಲಿ ಗುಡಿಬಂಡೆ, ಚೇಳೂರು, ಬಾಗೇಪಲ್ಲಿ ಸೇರಿ 3 ತಾಲೂಕುಗಳನ್ನು ಒಳಗೊಂಡಿರುವ ಏಕೈಕ ವಿಧಾನಸಭಾ ಕ್ಷೇತ್ರ ಬಾಗೇಪಲ್ಲಿ ಎಸ್​ಐಆರ್​(ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ)ನಲ್ಲಿ ಒಟ್ಟು 19594 ಗೈರು, ಮರಣ, ಸ್ಥಳಾಂತರ, ನಕಲಿ ಹಾಗೂ ಇತರ ಮತದಾರರನ್ನು ಗುರುತಿಸಲಾಗಿದೆ.

ಬಿಎಲ್​ಒಗಳು ಮನೆ ಮನೆ ಭೇಟಿ ನೀಡಿ ದಾಖಲೆ ಸಂಗ್ರಹಿಸಲು ಹಾಗೂ ಮತದಾರರು ಗಣತಿ ನಮೂನೆಯನ್ನು ಸಲ್ಲಿಸಲು ಆ.17ರವರೆಗೂ ಅವಕಾಶ ನೀಡಲಾಗಿದ್ದು, ಆ.24ಕ್ಕೆ ಕರುಡು ಮತದಾರರ ಪಟ್ಟಿ ಪ್ರಸ್ತುತ ಪಡಿಸಲಾಗವುದು. ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ಅರ್ಜಿ ಸಲ್ಲಿಸಲು ಆ.24ರಿಂದ ಸೆ.23ರವರೆಗೂ ಅವಕಾಶ ಕಲ್ಪಿಸಲಾಗಿದೆ.

— ಮನೀಷಾಪತ್ರಿ, ತಹಸೀಲ್ದಾರ್​ ಬಾಗೇಪಲ್ಲಿ

ಚೇಳೂರು ಆಂಧ್ರದ ಅನ್ನಮಯ್ಯ ಜಿಲ್ಲೆಗೆ ಹೊಂದಿಕೊಂಡಿದ್ದರೆ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳು ಆಂಧ್ರದ ಸತ್ಯಸಾಯಿ ಜಿಲ್ಲೆಗೆ ಹೊಂದಿಕೊಂಡಿವೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಆಂಧ್ರದ ಗಡಿಯಲ್ಲಿರುವ ಕಾರಣ ಅಲ್ಲಿನ ಶೇ.5 ಮತದಾರರು ಬಾಗೇಪಲ್ಲಿ ಮತದಾನದ ಹಕ್ಕು ಪಡೆದಿದ್ದಾರೆ.
ಕ್ಷೇತ್ರದಲ್ಲಿ ಒಟ್ಟು 267 ಮತಗಟ್ಟೆಗಳಿದ್ದು, 20, 4413 ಮತದಾರರನ್ನು ಹೊಂದಿದೆ. ಶೇ.100 ಗಣತಿ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಒಟ್ಟು 1,84,819 (ಶೇ.90.41)ಗಣತಿ ನಮೂನೆಗಳನ್ನು ಗಣಕೀಕರಿಸಲಾಗಿದೆ.

ಕ್ಷೇತ್ರದ ಜನಸಂಖ್ಯೆ 2023ರ ವಿಧಾನಸಭೆ ಚುನಾವಣೆ ಅನುಪಾತಕ್ಕಿಂತ ಶೇ.7 ಹೆಚ್ಚಾಗಿದೆ. ಎಸ್​ಐಆರ್​ ಪ್ರಕ್ರಿಯೆಯಿಂದ ಆಂಧ್ರ ಹಾಗೂ ಬೆಂಗಳೂರು ಮೂಲದ ಬಹುತೇಕ ಮತದಾರರನ್ನು ಹಾಗೂ ಹಲವೆಡೆ ಮತದಾನದ ಹಕ್ಕು ಪಡೆದುಕೊಂಡಿರುವ ನಕಲಿ ಮತದಾರರನ್ನು ಪಟ್ಟಿಯಿಂದ ತೆಗೆದು ಪಾರದರ್ಶಕ ಚುನಾವಣೆಗೆ ಅನುಕೂಲ ಕಲ್ಪಿಸಿರುವ ಎಸ್​ಐಆರ್​ ಪ್ರಕ್ರಿಯೆಯನ್ನು ಸ್ವಾಗತಿಸುತ್ತೇವೆ.

— ಗಣೇಶ್​ ರೆಡ್ಡಿ, ಬಾಗೇಪಲ್ಲಿ

ಆ.11ರಂದು ತಹಸೀಲ್ದಾರ್​ ಕಚೇರಿ ಬಿಡುಗಡೆ ಮಾಡಿರುವ ಮಾಹಿತಿಯಂತೆ ಸ್ಥಳಾಂತರಗೊಂಡಿರುವ ಮತದಾರರು 12,025, ಮರಣ ಹೊಂದಿರುವವರು 4745, ನಕಲಿ 1,720, ಸ್ಥಳಾಂತರಗೊಂಡವರು 1103, ಇತರ 1 ಸೇರಿ ಒಟ್ಟು 19594 ಎಎಸ್​ಡಿಡಿಒ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net