ಎಂಎಸ್‌ಪಿ ಯೋಜನೆಯಡಿ 1.58 ಗೋಣಿ ಚೀಲ ಬಳಕೆ- gunny bags

ಗೋಣಿ ಚೀಲಗಳು
ಗೋಣಿ ಚೀಲಗಳು
Published on
ಬೆಂಗಳೂರು: ಕನಿಷ್ಠ ಬೆಂಬಲ ಯೋಜನೆ(ಎಂಎಸ್‌ಪಿ) ರೈತರಿಗೆ ವರದಾನವಾಗಿದೆ. ಆಹಾರ ಇಲಾಖೆಯ ಅಧೀನದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಎಂಎಸ್‌ಪಿ ಯೋಜನೆಯಡಿ ಆಹಾರ ಧಾನ್ಯಗಳ ಖರೀದಿಸಿ ಪ್ಯಾಕಿಂಗ್ ಮತ್ತು ಸಾಗಣೆಗೆ ಈವರೆಗೆ 1,58,97,348 ಗೋಣಿ ಚೀಲಗಳು ಬಳಕೆಯಾಗಿವೆ. 2026ರ ಆ.24ವರೆಗೆ ಒಟ್ಟು 79,48,674 ಕ್ವಿಂಟಲ್ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ.
ಗೋಣಿ ಚೀಲ ಕೊರತೆಯಾಗದಂತೆ ನಿಗಮ,ಪ್ರಸ್ತುತ ಋತುವಿನಲ್ಲಿ ಒಟ್ಟು 1.53 ಕೋಟಿ ಚೀಲಗಳನ್ನು ವಿವಿಧ ಜಿಲ್ಲೆಗಳಿಗೆ ಪೂರೈಸಿದೆ. ರಾಜ್ಯದ ಇತರ ಜಿಲ್ಲೆಗಳಕ್ಕಿಂತ ರಾಯಚೂರಿನಲ್ಲಿ ಅತಿ ಹೆಚ್ಚು 12.65 ಲಕ್ಷ ಕ್ವಿಂಟಲ್ ಆಹಾರ ಧಾನ್ಯಗಳ ಖರೀದಿಗೆ 25.30 ಲಕ್ಷ ಗೋಣಿ ಚೀಲ ಬಳಕೆಯಾಗಿದೆ. ತುಮಕೂರಿನಲ್ಲಿ 12.32 ಕ್ವಿಂಟಲ್ ಆಹಾರ ಧಾನ್ಯ ಸಂಗ್ರಹಕ್ಕೆ 24.65 ಲಕ್ಷ ಚೀಲ ಮತ್ತು ಹಾಸನದಲ್ಲಿ 10.36 ಲಕ್ಷ ಕ್ವಿಂಟಲ್ ಆಹಾರ ಧಾನ್ಯಗಳ ಸಂಗ್ರಹಕ್ಕೆ 20.72 ಲಕ್ಷ ಗೋಣಿ ಚೀಲ ಉಪಯೋಗವಾಗಿದೆ. ಉಳಿದ ಜಿಲ್ಲೆಗಳಲ್ಲೂ ಲಕ್ಷಾಂತರ ಚೀಲಗಳು ಬಳಕೆಯಾಗಿವೆ.
2025-26ರಲ್ಲಿ ಎಂಎಸ್‌ಪಿ ಯೋಜನೆಯಡಿ 2,46,605 ರೈತರಿಂದ 5.693 ಲಕ್ಷ ಮೆಟ್ರಿಕ್ ಟನ್ ರಾಗಿ ಹಾಗೂ 40,845 ರೈತರಿಂದ 2.218 ಲಕ್ಷ ಮೆ.ಟನ್ ಬಿಳಿಜೋಳ ಖರೀದಿಯಾಗಿದ್ದು, ಇದು ಹೊಸ ದಾಖಲೆಯಾಗಿದೆ. ರಾಗಿ ಮತ್ತು ಬಿಳಿ ಜೋಳ ಖರೀದಿಯಿಂದ 3,602 ಕೋಟಿ ರೂ. ಮೌಲ್ಯದ ಆಹಾರ ಧಾನ್ಯಗಳ ವಹಿವಾಟು ನಡೆದಿದೆ. 2020- 21ರಲ್ಲಿ 4.753 ಮೆ.ಟನ್ ರಾಗಿ ಮತ್ತು 2024-25ರಲ್ಲಿ 1.941 ಮೆ.ಟನ್ ಬಿಳಿ ಜೋಳ ಖರೀದಿಯಾಗಿತ್ತು.
ವಿಶೇಷವಾಗಿ ಒಣ ಭೂಮಿ ಪ್ರದೇಶಗಳಲ್ಲಿ ರಾಗಿ ಮತ್ತು ಬಿಳಿಜೋಳ ಬೆಳೆಯುವ ರೈತರು, ಮುಂದಿನ ದಿನಗಳಲ್ಲಿ ತಮ್ಮ ಆಹಾರ ಧಾನ್ಯಗಳನ್ನು ಉತ್ತಮ ಗುಣಮಟ್ಟದಲ್ಲಿ ಸರ್ಕಾರದ ಖರೀದಿ ಕೇಂದ್ರಗಳಿಗೆ ತರಬೇಕೆಂದು ಇಲಾಖೆ ಮನವಿ ಮಾಡಿದೆ. 2025-26ರ ಖಾರೀಫ್​​​ ಮಾರಾಟ ಋತುವಿನಲ್ಲಿ ಧಾನ್ಯಗಳ ಸಂಗ್ರಹಣೆಯಲ್ಲಿ ಅತ್ಯುತ್ತಮ ಸಾಧನೆಗಾಗಿ ಕೇಂದ್ರ ಆಹಾರ ಇಲಾಖೆ, ರಾಜ್ಯ ಆಹಾರ ಇಲಾಖೆಗೆ ‘ಶ್ರೀ ಅನ್ನ ಸಂಗ್ರಹಣೆಯಲ್ಲಿ ಶ್ರೇಷ್ಠತೆ ಪ್ರಶಸ್ತಿ ನೀಡಿದೆ.
ಖುದ್ದು ಗೋಣಿ ಚೀಲ ಪಡೆಯಿರಿ
ಈ ಯೋಜನೆಯಡಿ ಕೇಂದ್ರ ಸರ್ಕಾರವು ಉಚಿತವಾಗಿ ಗೋಣಿ ಚೀಲವನ್ನು ರೈತರಿಗೆ ನೀಡುತ್ತಿದೆ. ಇದಕ್ಕಾಗಿ ನಿಗಮಕ್ಕೆ ಕೋಟ್ಯಂತರ ರೂ. ಹಣ ಕೊಡುತ್ತಿದೆ. ರಾಗಿ, ಭತ್ತ ಮತ್ತು ಜೋಳ ಮಾರಾಟ ಮಾಡುವ ರೈತರು, ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಣಿ ಚೀಲ ಅಥವಾ ಅದಕ್ಕೆ ಹಣ ಪಡೆಯಬಹುದು.ಒಂದು ವೇಳೆ ಅಧಿಕಾರಿಗಳು ನೀಡದಿದ್ದರೆ ಸಂಬಂಧಪಟ್ಟ ಮೇಧಿಕಾರಿಗಳಿಗೆ ದೂರು ನೀಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net