ನೇತ್ರ ಶಸ್ತ್ರಚಿಕಿತ್ಸೆಗೆ 15 ಜನ ಆಯ್ಕೆ

ಮಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಆಸ್ಪತ್ರೆ ವೈದ್ಯರಿಂದ ಜನರ ನೇತ್ರ ತಪಾಸಣೆ ನಡೆಯಿತು. ಡಾ.ಸುರೇಶ ಬಂಡಗಾರ, ಡಾ.ಸಂಜೀವಿನಿ ಜಾಧವ್​, ವಿಠ್ಠಲ ಬಡಿಗೇರ, ಅತಾ ಎಂ.ಕೆ., ಪೂಜಾ, ಎಸ್ರಾ ಸೈಮಾ, ಸಲೋನಿ ಬಿ., ನಿಖಿಲಾ ಮಡಿವಾಳ, ಪ್ರೀತಿ ಬಿರಾದಾರ ಇತರರಿದ್ದರು.
ಮಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಆಸ್ಪತ್ರೆ ವೈದ್ಯರಿಂದ ಜನರ ನೇತ್ರ ತಪಾಸಣೆ ನಡೆಯಿತು. ಡಾ.ಸುರೇಶ ಬಂಡಗಾರ, ಡಾ.ಸಂಜೀವಿನಿ ಜಾಧವ್​, ವಿಠ್ಠಲ ಬಡಿಗೇರ, ಅತಾ ಎಂ.ಕೆ., ಪೂಜಾ, ಎಸ್ರಾ ಸೈಮಾ, ಸಲೋನಿ ಬಿ., ನಿಖಿಲಾ ಮಡಿವಾಳ, ಪ್ರೀತಿ ಬಿರಾದಾರ ಇತರರಿದ್ದರು.
Published on

ಕರಜಗಿ: ಮಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆ ವೈದ್ಯರಿಂದ ಉಚಿತವಾಗಿ ನೇತ್ರ ತಪಾಸಣೆ ಶಿಬಿರ ಸೋಮವಾರ ನಡೆಯಿತು. ಕಣ್ಣಿನ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದ 15 ಜನರನ್ನು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಮಣ್ಣೂರ, ಹೊಸೂರ, ಶೇಷಗಿರಿ, ಶಿವಬಾಳನಗರ, ದೇವಪ್ಪ ನಗರ, ಉಪ್ಪಾರವಾಡಿ, ರಾಮನಗರ, ದಯಾನಂದ ನಗರ, ಬಾಬಾನಗರ ಸೇರಿ ಸುತ್ತಲಿನ ಗ್ರಾಮಗಳ ನೂರಾರು ಜನರು ಬೆಳಗ್ಗೆ ಆಸ್ಪತ್ರೆಗೆ ಆಗಮಿಸಿ ಕಣ್ಣು ತಪಾಸಣೆ ಮಾಡಿಕೊಂಡರು. ಡಾ.ಸುರೇಶ ಬಂಡಗಾರ, ಡಾ.ಸಂಜೀವಿನಿ ಜಾಧವ್​ ನೇತೃತ್ವದ ವೈದ್ಯದ ತಂಡ ತಪಾಸಣೆ ನಡೆಸಿ ಸೂಕ್ತ ಔಷಧೋಪಚಾರ ನೀಡಿತು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ, ಹಲವು ಸಲಹೆ ನೀಡಿದರು. ಅತಾ ಎಂ.ಕೆ., ಪೂಜಾ, ಎಸ್ರಾ ಸೈಮಾ, ಸಲೋನಿ ಬಿ., ನಿಖಿಲಾ ಮಡಿವಾಳ, ಪ್ರೀತಿ ಬಿರಾದಾರ, ಅರ್ಚನಾ, ಲ್ಮಣ ಬಂಕಲಗಿ, ವಿಠ್ಠಲ ಬಡಿಗೇರ, ಹಣಮಂತ ಅಲ್ಲಾಪುರ, ಶೀಲಾಬಾಯಿ ಹಿರೇಮಠ, ಸುಕನ್ಯಾ ಕರಜಗಿ, ಶೋಭಾ ಹಿರೇಮಠ, ಪ್ರಕಾಶ ಬಿರಾದಾರ, ಗುರುಪಾದ ಬಿಲ್ಲಾಡ, ಸುಮಂಗಲಾ ಕಾಂಬಳೆ, ಶಿವರಾಜ ಅಂದೇವಾಡಿ, ಕೇಶವ ಶಿಂದೆ, ಪುಂಡಲೀಕ, ಕವಿತಾ ಜಾಧವ್​, ಬೌರಮ್ಮ ಲೋಹಾರ, ಸುಜಾತಾ ಪತ್ತಾರ್​, ಶಬಾನಾ ಕೊರಬು, ಕವಿತಾ ಹಡಪದ, ಗೌರಾಬಾಯಿ ಮೋಸಲಗಿ, ಮಾಯವ್ವ ಪೂಜಾರಿ, ರುಕ್ಕಮ್ಮ ಜಮಾದಾರ ಇತರರಿದ್ದರು. ಒಟ್ಟು 250 ಜನರ ನೇತ್ರ ತಪಾಸಣೆ ಮಾಡಲಾಗಿದ್ದು, 85 ಜನರಿಗೆ ಕನ್ನಡಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net