ಬನಶಂಕರಿ ಅಮ್ಮನವರ 110ನೇ ಜಾತ್ರಾ ಮಹೋತ್ಸವ

ಬನಶಂಕರಿ ಅಮ್ಮ
ಬನಶಂಕರಿ ಅಮ್ಮ
Published on

ಪ್ರಮುಖ ಮುಖ್ಯಾಂಶಗಳು

  • * ಪ್ರತಿದಿನ ಮುಂಜಾನೆ ಅಮ್ಮನವರಿಗೆ ಸುಪ್ರಭಾತ ಸೇವೆ
  • * ಡಿ.28ರಂದು ಸಂಜೆ 4ಕ್ಕೆ ಗೋಪೂಜೆ, ಗಂಗಾಪೂಜೆ
  • * ಡಿ.31ರಂದು ಬೆಳಗ್ಗೆ ಶ್ರೀ ದುರ್ಗಾ ಹೋಮ
ಬೆಂಗಳೂರು: ಬೆಂಗಳೂರಿನ ಬನಶಂಕರಿ ಅಮ್ಮನವರ 110ನೇ ಜಾತ್ರಾ ಮಹೋತ್ಸವ ಶನಿವಾರದಿಂದ (ಡಿ.28 ರಿಂದ ಜ. 7 ರವರೆಗೆ) ಆರಂಭವಾಗಲಿದ್ದು, ಪ್ರತಿದಿನ ಮುಂಜಾನೆ 5 ಗಂಟೆಗೆ ಅಮ್ಮನವರಿಗೆ ಸುಪ್ರಭಾತ ಸೇವೆ, ವಿಶೇಷ ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರಗಳು ನಡೆಯಲಿವೆ.
ಡಿ.28ರಂದು ಸಂಜೆ 4ಕ್ಕೆ ಗೋಪೂಜೆ, ಗಂಗಾಪೂಜೆ ನಡೆಯಲಿದೆ. ನಿತ್ಯವೂ ಹೋಮ, ಹವನ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.29ರಂದು ಮಹಾಗಣಪತಿ ಹೋಮ, 30ರಂದು ಸುದರ್ಶನ ಹೋಮ ನಡೆಯಲಿದೆ. ಡಿ.31ರಂದು ಬೆಳಗ್ಗೆ ಶ್ರೀ ದುರ್ಗಾ ಹೋಮ, ಸಂಜೆ ಶ್ರೀ ದುರ್ಗಾದೀಪ ನಮಸ್ಕಾರ ನಡೆಯಲಿದೆ.
ಜ.1ರಂದು ಶತರುದ್ರಾಭಿಷೇಕ, 2ರಂದು ನವಚಂಡಿಕಾ ಹೋಮ ನಡೆಯಲಿದೆ. ಜ. 3ರಂದು ಬನದ ಹುಣ್ಣಿಮೆ ಹಿನ್ನೆಲೆಯಲ್ಲಿ ಮಧ್ಯಾಹ್ನ 1.10 ರಿಂದ ರಥಾರೋಹಣ, ಸಂಜೆ 4ಕ್ಕೆ ರಥಾವರೋಹಣ, 4.30ಕ್ಕೆ ಅಮ್ಮನವರಿಗೆ ಧೂಳೋತ್ಸವ, ಸಂಜೆ 6ಕ್ಕೆ ಶಾಕಾಂಬರಿ ದೇವಿಯವರಿಗೆ ಮುತ್ತಿನ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿದೆ. 4ರಂದು ಪವಮಾನ ಹೋಮ, 5ರಂದು ಸ್ಕಂದ ಹೋಮ ಜರುಗಲಿದೆ. 6ರಂದು ಗಿರಿಜಾ ಶಂಕರ ಕಲ್ಯಾಣೋತ್ಸವ. ಕೊನೆಯ ದಿನವಾದ ಜ. 7ರಂದು ಬೆಳಗ್ಗೆ 8.30ಕ್ಕೆ ಮಹಾನ್ಯಾಸ ಪೂರ್ವಕ ಏಕಾದಶವಾರ ರುದ್ರಾಭಿಷೇಕ, ಬನಶಂಕರಿ ದೇವಿಗೆ ಮಹಾಭಿಷೇಕ ನಡೆಯಲಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net