ಬಸವಸಾಗರದಿಂದ ೧.೦೫ ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ

ನಾರಾಯಣಪುರದ ಬಸವಸಾಗರ ಜಲಾಶಯ
ನಾರಾಯಣಪುರದ ಬಸವಸಾಗರ ಜಲಾಶಯ
Published on

ಪ್ರಮುಖ ಮುಖ್ಯಾಂಶಗಳು

  • ನದಿ ತೀರಕ್ಕೆ ತೆರಳದಂತೆ ಜಿಲ್ಲಾಽಕಾರಿ ಪಾಂಡ್ವೆ ಸೂಚನೆ
ಯಾದಗಿರಿ:

ನಾರಾಯಣಪುರದ ಬಸವಸಾಗರ ಜಲಾಶಯದಿಂದ ೧.೦೫ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ನದಿ ತೀರಕ್ಕೆ ತೆರಳಬಾರದು ಎಂದು ಜಿ¯್ಲÁಽಕಾರಿ ರಾಹುಲï ಕೆ. ಪಾಂಡ್ವೆ ಮನವಿ ಮಾಡಿz್ದÁರೆ.

ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಾಶಯವು ಶೇ.೮೮ರಷ್ಟು ಭರ್ತಿಯಾಗಿದ್ದು, ಮೇಲ್ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಇನ್ನಷ್ಟು ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಸದ್ಯ ಸನ್ನತಿ ಬ್ಯಾರೇಜ್‌ನಿಂದ ೪೨ ಸಾವಿರ ಕ್ಯೂಸೆಕ್ ಹಾಗೂ ಯಾದಗಿರಿ ಬ್ಯಾರೇಜ್‌ನಿಂದ ೩೫ ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನದಿ ತೀರದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಸಿಬ್ಬಂದಿ ಮೂಲಕ ಸಾರ್ವಜನಿಕರಿಗೆ ನಿರಂತರ ಜÁಗೃತಿ ಮೂಡಿಸಲಾಗುತ್ತಿದೆ. ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಗ್ರಾಮಗಳಲ್ಲಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದರು.
ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿ¯್ಲÁಡಳಿತದಿಂದ ನೀಡಲಾಗುವ ಅಽಕೃತ ಮಾಹಿತಿ ಮತ್ತು ಸೂಚನೆ ಮಾತ್ರ ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ತುರ್ತು ಪರಿಸ್ಥಿತಿ ಎದುರಾದರೆ ಕೂಡಲೇ ಸ್ಥಳೀಯ ಅಽಕಾರಿಗಳಿಗೆ ಮಾಹಿತಿ ನೀಡುವಂತೆ ಅವರು ಸೂಚನೆ ನೀಡಿದ್ದಾರೆ.

ನದಿ ತೀರದ ನಿವಾಸಿಗಳು ಎಚ್ಚರ ವಹಿಸಿ

ನದಿಯಲ್ಲಿ ಮೀನುಗಾರಿಕೆ, ಈಜುವುದು, ಬಟ್ಟೆ ತೊಳೆಯುವುದು ಸೇರಿ ಯಾವುದೇ ರೀತಿಯ ಚಟುವಟಿಕೆ ನಡೆಸಬಾರದು. ಪ್ರವಾಹದ ನೀರಿನ ವೇಗ ಕ್ಷಣಕ್ಷಣಕ್ಕೂ ಬದಲಾಗುವ ಸಾಧ್ಯತೆ ಇರುವುದರಿಂದ ನದಿ ತೀರದ ನಿವಾಸಿಗಳು ಹಾಗೂ ರೈತರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net