ಸುವರ್ಣಶ್ರೀ, ಜಾನಪದ ವಿಭೂತಿ ಪ್ರಶಸ್ತಿ ಪ್ರಕಟ; ನ.16, 17ಕ್ಕೆ ವಿಭೂತಿಪುರ ಮಠದಲ್ಲಿ ಪ್ರದಾನ

Woode P Krishna
Woode P Krishna
Published on

ಪ್ರಮುಖ ಮುಖ್ಯಾಂಶಗಳು

  • ಸುವರ್ಣಶ್ರೀ, ಜಾನಪದ ವಿಭೂತಿ ಪ್ರಶಸ್ತಿ
  • ನ.16, 17ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ
  • ವಿಭೂತಿಪುರ ಮಠದ ಜಾತ್ರೆ

ಬೆಂಗಳೂರು:ವಿಭೂತಿಪುರಮಠದಿಂದ ಪ್ರತಿವರ್ಷ ಕೊಡಮಾಡುವಸುವರ್ಣಶ್ರೀ ಮತ್ತು ಜಾನಪದ ವಿಭೂತಿ2025ನೇಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನುಪ್ರಕಟಿಸಲಾಗಿದೆ.

ಶಿಕಣಮತ್ತು ಸಾಹಿತ್ಯ ಕ್ಷೇತ್ರದಸೇವೆಗಾಗಿ ನಾಡೋಜ ಡಾ.ವೂಡೇ ಪಿ.ಕೃಷ್ಣರವರನ್ನುಸುವರ್ಣಶ್ರೀ ಪ್ರಶಸ್ತಿಗೆ ಮತ್ತುಜೋಗತಿ ನೃತ್ಯದ ಮೂಲಕ ಏಡ್ಸ್ಮತ್ತಿತರ ಮಾರಕ ರೋಗದ ಬಗ್ಗೆಜಾಗೃತಿ ಮೂಡಿಸುವ ಮೂಲಕ ಪ್ರಸಿದ್ಧರಾಗಿರುವಕಲಾವಿದ ರಾಚಯ್ಯ ವೀರಭದ್ರಯ್ಯಅವರು ಜಾನಪದ ವಿಭೂತಿ ಪ್ರಶಸ್ತಿಗೆಆಯ್ಕೆಯಾಗಿದ್ದಾರೆ ಎಂದು ಶ್ರೀಮಠದಡಾ.ಮಹಾಂತಲಿಂಗಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

ಸುವರ್ಣಶ್ರೀಪ್ರಶಸ್ತಿಯು 50ಸಾವಿರ ನಗದು,ಕಂಚಿನ ಪ್ರಶಸ್ತಿಪತ್ರ ಮತ್ತು ನೆನಪಿನ ಕಾಣಿಕೆಒಳಗೊಂಡಿದ್ದು,ಜಾನಪದ ವಿಭೂತಿಪ್ರಶಸ್ತಿಯು 25ಸಾವಿರ ನಗದು,ತಾಮ್ರದ ಪ್ರಶಸ್ತಿಪತ್ರಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ.

.16ರಂದು ಸಂಜೆ 6ಕ್ಕೆವಿಭೂತಿಪುರ ಮಠದ ಶ್ರೀ ಜಗದ್ಗುರುಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿನಡೆಯುವ ಜಾನಪದೋತ್ಸವ ಕಾರ್ಯಕ್ರಮದಲ್ಲಿಜಾನಪದ ವಿಭೂತಿ ಪ್ರಶಸ್ತಿ ಪ್ರದಾನಮಾಡಲಾಗುವುದು.ಅಂದಿನ ಕಾರ್ಯಕ್ರಮದಲ್ಲಿಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ,ಎಮ್ಮಿಗನೂರಿನಶ್ರೀ ವಾಮದೇವ ಶಿವಾಚಾರ್ಯ ಸ್ವಾಮೀಜಿ, ಸರ್ಪಭೂಷಣ ಮಠದಶ್ರೀ ಮಲ್ಲಿಕಾರ್ಜುನ ಸ್ವಾಮೀಜಿಪಾಲ್ಗೊಳ್ಳಲಿದ್ದಾರೆ.

.17ರಂದು ಬೆಳಗ್ಗೆ11ಕ್ಕೆನಡೆಯಲಿರುವ ಜಾತ್ರಾ ಮಹೋತ್ಸವದಲ್ಲಿಸುವರ್ಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಸಮಾರಂಭದಲ್ಲಿನೊಣವಿನಕೆರೆಯ ಡಾ.ಕರಿವೃಷಭದೇಶೀಕೇಂದ್ರ ಶಿವಯೋಗೀಶ್ವರಸ್ವಾಮೀಜಿ,ಕೊಟ್ಟೂರುಶ್ರೀಗಳು, ಮಾಜಿಸಚಿವ ಅರವಿಂದ ಲಿಂಬಾವಳಿ ಮತ್ತಿತರಗಣ್ಯರು ಪಾಲ್ಗೊಳ್ಳಲಿದ್ದಾರೆ.

ಇದೇವೇಳೆ ಶ್ರೀ ವೀರಭದ್ರಸ್ವಾಮಿಜಾತ್ರಾ ಮಹೋತ್ಸವದ ಅಂಗವಾಗಿಶ್ರೀಜಗದ್ಗುರು ಪಂಚಾಚಾರ್ಯರಯುಗಮಾನೋತ್ಸವ,ಬಸವಾದಿ ಶರಣರಮತ್ತು ಲಿಂಗೈಕ್ಯ ಸುವರ್ಣಲಿಂಗಶಿವಾಚಾರ್ಯ ಸ್ವಾಮಿಗಳ ಸಂಸ್ಮರಣೋತ್ಸವಹಾಗೂ ಮತ್ತಿತರ ಧಾರ್ಮಿಕ ಮತ್ತುಸಾಂಸ್ಕೃತಿಕ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net