ಬೈಲಹೊಂಗಲ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮವನ್ನು ಜಯಾನಂದ ನರಸನ್ನವರ ಉದ್ಘಾಟಿಸಿದರು. ಅನಿಲಕುಮಾರ ಪಾತ್ರೋಟ, ಕೀರ್ತಿ ಹುಕ್ಕೇರಿ, ರಶ್ಮಿ ಜಕ್ಕನ್ನವರ ಇತರರಿದ್ದರು.
ಬೈಲಹೊಂಗಲ: ಪ್ರತಿಯೊಬ್ಬರೂ ಪರಿಸರ ರಣೆ ಹೊಣೆಗಾರಿಕೆ ಅರಿತು, ವಾಯುಮಾಲಿನ್ಯ ತಡೆಯುವತ್ತ ಗಮನಹರಿಸಬೇಕು ಎಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಯಾನಂದ ನರಸನ್ನವರ ಹೇಳಿದರು.
ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪರಿಸರ ಸಂರಣೆ ನಮ್ಮೆಲ್ಲರ ಹೊಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಮಾಲೀಕರು ನಿಯಮಿತವಾಗಿ ಪ್ಯೂಸಿ ಪ್ರಮಾಣಪತ್ರ ಪಡೆಯಬೇಕು ಹಾಗೂ ವಾಹನಗಳ ಸಮರ್ಪಕ ನಿರ್ವಹಣೆ ಮೂಲಕ ವಾತಾವರಣ ಸ್ವಚ್ಛವಾಗಿಡಲು ಸಹಕಾರ ನೀಡಬೇಕು ಎಂದರು.
ಮೋಟಾರು ವಾಹನ ನಿರೀಕ ಅನಿಲಕುಮಾರ ಪಾತ್ರೋಟ, ಸೂಪರಿಂಟೆಂಡೆಂಟ್ ಕೀರ್ತಿ ಹುಕ್ಕೇರಿ, ರಶ್ಮಿ ಜಕ್ಕನ್ನವರ, ಹಾಗೂ ಅನೇಕ ವಾಹನ ಮಾಲೀಕರು, ಚಾಲಕರು ಹಾಗೂ ಸಿಬ್ಬಂದಿ ಇದ್ದರು.