ಗಾಂಧೀಜಿ ವಿಚಾರಧಾರೆ ಅನುಷ್ಠಾನಗೊಳ್ಳಲಿ

ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಮಾತನಾಡಿದರು. ಸುಧೀಂದ್ರ ಕುಲಕರ್ಣಿ, ಪ್ರೊ.ಮಂಜುನಾಥ ಹಿರೇಮಠ, ಹಣಮಂತ್ರಾಯ ಬಿರಾದಾರ ಇತರರಿದ್ದರು.
ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ದಿನೇಶ ಅಮ್ಮಿನಮಟ್ಟು ಮಾತನಾಡಿದರು. ಸುಧೀಂದ್ರ ಕುಲಕರ್ಣಿ, ಪ್ರೊ.ಮಂಜುನಾಥ ಹಿರೇಮಠ, ಹಣಮಂತ್ರಾಯ ಬಿರಾದಾರ ಇತರರಿದ್ದರು.
Published on
ರಾಮದುರ್ಗ: ಮಹಾತ್ಮಾ ಗಾಂಧೀಜಿ ಅವರು ಗ್ರಾಮಸ್ವರಾಜ್ಯ ಸ್ಥಾಪನೆ, ಅಸ್ಪಶ್ಯತೆ ಹಾಗೂ ಕೋಮುವಾದದ ವಿರುದ್ಧ ಹೋರಾಟ ನಡೆಸಿದರೂ ಅವರ ವಿಚಾರಧಾರೆಗಳು ಇಂದಿಗೂ ಸಾಕಾರಗೊಳ್ಳದಿರುವುದು ದು@ಖದ ಸಂಗತಿ ಎಂದು ಹಿರಿಯ ಪತ್ರಕರ್ತ ದಿನೇಶ ಅಮಿನಮಟ್ಟು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಗುರುಭವನದಲ್ಲಿ ಗಾಂಧಿ ಚಿಂತನೆಯ ಪ್ರಸ್ತುತತೆ ಎಂಬ ವಿಷಯ ಕುರಿತಾದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿ, ಅತಿಯಾದ ನಗರೀಕರಣದಿಂದ ಗಾಂಧೀಜಿ ಗ್ರಾಮಸ್ವರಾಜ್ಯದ ಕನಸಿಗೆ ಹಿನ್ನಡೆಯಾಗುತ್ತಿದ್ದು, ಸ್ಮಾರ್ಟ್​ಸಿಟಿ ಬದಲಿಗೆ ಸ್ಮಾರ್ಟ್​ ವಿಲೇಜ್​ಗಳು ನಿರ್ಮಾಣವಾದರೆ ದೇಶದ ಆರ್ಥಿಕತೆ ಸುಧಾರಿಸುತ್ತದೆ. ಕೇವಲ ರಾಜಕೀಯ ಲಾಭಕ್ಕಾಗಿ ಯೋಜನೆಗಳ ಜಾರಿಯಾಗದೆ ಜನರಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಜಾರಿಯಾಗಬೇಕು ಎಂದರು.
ರಾಜ್ಯಸಭಾ ಮಾಜಿ ಸದಸ್ಯ ಸುಧೀಂದ್ರ ಕುಲಕರ್ಣಿ ಮಾತನಾಡಿ, ಕೆಲ ಪಟ್ಟಭದ್ರರ ವಾದಗಳಿಂದ ಗಾಂಧೀಜಿ ಅವರು, ಕುರಿತು ಇಂದಿಗೂ ಕೆಲ ವಿವಾದಗಳು ಜೀವಂತವಾಗಿರುವುದು ವಿಷಾದದ ಸಂಗತಿ ಎಂದರು.
ಪ್ರೊ.ಮಂಜುನಾಥ ಹಿರೇಮಠ, ಬ್ಯಾಂಕ್​ ಆ್​ ಬರೋಡಾ ಶಾಖಾ ವ್ಯವಸ್ಥಾಪಕ ಹಣಮಂತ್ರಾಯ ಬಿರಾದಾರ ಮಾತನಾಡಿದರು.
ಪ್ರಶಸ್ತಿ ವಿಜೇತರು: ಪ್ರಬಂಧ ಸ್ಪರ್ಧೆಯ ಶಿಕ್ಷಕರ ವಿಭಾಗದಲ್ಲಿ ವಿಠ್ಠಲ ದಳವಾಯಿ ಪ್ರಥಮ, ಮಹೇಶ ಹಾಲೋಳ್ಳಿ ದ್ವೀತಿಯ, ಪ್ರಕಾಶ ತೆಗ್ಗಿಹಳ್ಳಿ ತತೀಯ, ಭೀಮನಗೌಡ ದಂಡಿನದುರ್ಗಿ ಹಾಗೂ ಪಿ.ಎಂ.ಗೌಡರ ಸಮಾಧಾನಕರ ಬಹುಮಾನ ಪಡೆದರು. ವಿದ್ಯಾರ್ಥಿ ವಿಭಾಗದಲ್ಲಿ ಲಕ್ಷಿ$್ಮ ಪಾಟೀಲ ಪ್ರಥಮ, ವಿಜಯಲಕ್ಷಿ$್ಮ ಅಥಣಿ ದ್ವೀತಿಯ, ನಂದಕುಮಾರ ಲಮಾಣಿ ತತೀಯ ಸ್ಥಾನ ಪಡೆದರು. ತಾಪಂ ಇಒ ಬಸವರಾಜ ಐನಾಪೂರ, ಬಿಇಒ ಸುರೇಂದ್ರ ಕಾಂಬಳೆ, ಎನ್​.ಎಂ.ಬಿರಾದಾರ, ಡಾ.ವೆ.ಬಿ.ಕುಲಗೋಡ, ಪರಶುರಾಮ ಯತ್ನಾಳ, ಅರವಿಂದ ಹಗೇದ, ಎಂ.ಎಸ್​.ನಿಜಗುಲಿ, ಶಿವಾನಂದ ಜಾಮದಾರ, ಸುರೇಶ ಏಣಿ, ಡಾ.ಸೆಯ್ಯದ್​ಅಲಿ ಅಲ್ಲಿಸಾಬನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net