ಬೈಲಹೊಂಗಲ: ಅವರಿಗೆ ಮಾತು ಬರದೇ ಇದ್ದರೂ ಕುಟುಂಬದ ಜವಾಬ್ದಾರಿ ಹೊತ್ತವರು. ಕೇವಲ ಕೆಸನ್ನೆ, ಬಾಯಿ ಸನ್ನೆಯಲ್ಲಿ ಜೀವನ ನಡೆಸುವುದು ಅನಿವಾರ್ಯವಾದರೂ ಸುಶಿತರಾಗಿ ಸ್ವಾವಲಂಬನೆಯ ಜೀವನ ಸಾಗಿಸುತ್ತಿರುವುದು ಅವರ ಹಿರಿಮೆ. ಅವರಿಗೆ ಕಂಕಣಬಲ ಕೂಡಿಬಂದಿದ್ದು, ಅವರಿಗೆ ಜತೆಗಾರರಾಗಿ ದೊರೆತವರೂ ಮಾತು ಬರದವರೇ. ಇಂಥ ವಿಶಿಷ್ಟ ಮೌನರಾಗದ ದಾಂಪತ್ಯಕ್ಕೆ ಇತ್ತೀಚೆಗೆ ನಗರದ ಗಣಾಚಾರಿ ಕಲ್ಯಾಣಮಂಟಪ ಸಾಯಾಯಿತು. ನಗರದ ಶ್ರೀ ಶಿವಾನಂದ ಭಾರತಿ ನಗರದ ನಿವಾಸಿ ಲಕ್ಷಿ$್ಮ ಮುರಗೇಶ ದೊಡಮನಿ ಇವರ ಪುತ್ರರಾದ ವಿನಾಯಕ ಹಾಗೂ ಮಲ್ಲಿಕಾರ್ಜುನ ಹುಟ್ಟು ಮೂಗರಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿನಾಯಕ ತುಮಕೂರ ಜಿಲ್ಲೆ ಗುಬ್ಬಿ ತಾಲೂಕಿನ ಅಂತಾಪುರ ಗ್ರಾಮದ ಕವಿತಾ ಹಾಗೂ ಚಿಕ್ಕಕೆಂಪಯ್ಯ ಇವರ ಪುತ್ರಿ ಪವಿತ್ರಾ ಅವರನ್ನು ಹಾಗೂ ಮಲ್ಲಿಕಾರ್ಜುನ ಸವದತ್ತಿ ತಾಲೂಕು ಹಿರೇಕೊಪ್ಪ ಗ್ರಾಮದ ನಾಗಪ್ಪ ಹೊಂಗಲ ಇವರ ಪುತ್ರಿ ರಾಜೇಶ್ವರಿ ಅವರನ್ನು ವರಿಸಿದರು. ಈ ವಿಶಿಷ್ಟ ವಿವಾಹಕ್ಕೆ ಹಲವು ಮಠಾಧೀಶರು, ಜನಪ್ರತಿನಿಧಿಗಳು, ಗುರು&ಹಿರಿಯರು ಸಾಯಾದರು. ಈ ಇಬ್ಬರೂ ಸಹೋದರರು ಬೆಳಗಾವಿಯ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿರುವುದು ವಿಶೇಷ.