ಮಿನಿ ಒಲಿಂಪಿಕ್​ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ

ಮಿನಿ ಒಲಂಪಿಕ್​ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಳೊಂದಿಗೆ ತರಬೇತುದಾರರಾದ ಮಂಜುನಾಥ ಟಿ, ರವಿ ಕೆಂಪಣ್ಣನವರ.
ಮಿನಿ ಒಲಂಪಿಕ್​ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆಗೈದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಳೊಂದಿಗೆ ತರಬೇತುದಾರರಾದ ಮಂಜುನಾಥ ಟಿ, ರವಿ ಕೆಂಪಣ್ಣನವರ.
Published on
ಕಟಕೋಳ: ಸಮೀಪದ ಚಂದರಗಿ ಗ್ರಾಮದ ಎಸ್​.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ಈಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಮಿನಿ ಒಲಿಂಪಿಕ್​ ಕುಸ್ತಿ ಪಂದ್ಯಾವಳಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಲ್ಲನಗೌಡ ಸೌದತ್ತಿ 85 ಕೆಜಿ ಪ್ರಿಸ್ಟೆಲ್​ ವಿಭಾಗದಲ್ಲಿ ಚಿನ್ನದ ಪದಕ, ವಿಠೋಭ ನನ್ನವರೆ 41 ಕೆಜಿ ಪ್ರಿಸ್ಟೆಲ್​ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಮಣಿಕಂಠ ಶಿಂತ್ರೆ 44 ಕೆಜಿ ಗ್ರೀಕೋರೋಮನ್​ನಲ್ಲಿ ಕಂಚಿನ ಪದಕ, ಶ್ರೀನಿವಾಸ ಬೋರನ್ನವರ 44 ಕೆಜಿ ಪ್ರಿಸ್ಟೆಲ್​ನಲ್ಲಿ ಕಂಚಿನ ಪದಕ ಪಡೆದರೆ ರೆಹಾನ್​ ನದಾಫ್​ 68 ಕೆಜಿ ವಿಭಾಗದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಸಂಸ್ಥೆ ಸಂಸ್ಥಾಪಕರು, ಅಧ್ಯರು, ಉಪಾಧ್ಯರು, ನಿರ್ದೇಶಕ ಮಂಡಳಿ, ವ್ಯವಸ್ಥಾಪಕರು ಹಾಗೂ ಪ್ರಾಚಾರ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net