ಹಸಿವು ನೀಗಿಸುವುದು ಕ್ಯಾಂಟಿನ್​ ಧ್ಯೇಯ

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಅಂಗವಿಕಲರಿಗೆ ಶಾಸಕ ಬಾಬಾಸಾಹೇಬ ಪಾಟೀಲ ತ್ರಿಚಕ್ರ ವಾಹನ ವಿತರಿಸಿದರು. ತಹಸೀಲ್ದಾರ್​ ಕಲಗೌಡ ಪಾಟೀಲ, ಮಲ್ಲಿಕಾರ್ಜುನ ಕಲಾದಗಿ ಇತರರಿದ್ದರು.
ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಅಂಗವಿಕಲರಿಗೆ ಶಾಸಕ ಬಾಬಾಸಾಹೇಬ ಪಾಟೀಲ ತ್ರಿಚಕ್ರ ವಾಹನ ವಿತರಿಸಿದರು. ತಹಸೀಲ್ದಾರ್​ ಕಲಗೌಡ ಪಾಟೀಲ, ಮಲ್ಲಿಕಾರ್ಜುನ ಕಲಾದಗಿ ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು:
ಸಮಾಜದಲ್ಲಿನ ಬಡವರು, ಅಸಹಾಯಕರು ಹಾಗೂ ಅಗತ್ಯ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರ ಹಸಿವು ನೀಗಿಸುವುದು ಇಂದಿರಾ ಕ್ಯಾಂಟಿನ್​ ಮುಖ್ಯಧ್ಯೇಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ಹಳೇ ತಹಸೀಲ್ದಾರ್​ ಕಚೇರಿ ಬಳಿ ಜಿಲ್ಲಾಡಳಿತ ಹಾಗೂ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಂದಿರಾ ಕ್ಯಾಂಟಿನ್​ ಉದ್ಘಾಟನೆ, ನಗರೋತ್ಥಾನದ ನಾಲ್ಕನೇ ಹಂತದ ಅನುದಾನದಲ್ಲಿ ಅಂಗವಿಕಲರಿಗೆ ವಾಹನ ಹಾಗೂ ಹೊಲಿಗೆ ಯಂತ್ರ ವಿತರಣೆ ಹಾಗೂ ಕೊಳಗೇರಿ ಅಭಿವೃದ್ಧಿ ಮಂಡಳಿಯ ಹಕ್ಕು ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟಿನ್​ ಪಟ್ಟಣದಲ್ಲಿ ಉದ್ಘಾಟನೆಯಾಗಿದೆ. ಹಂತ ಹಂತವಾಗಿ ಸರ್ಕಾರದ ಮಹತ್ವಾಕಾಂ ಯೋಜನೆಗಳ ಅನುಷ್ಠಾನಕ್ಕೆ ಶ್ರಮಿಸಲಾಗುತ್ತಿದೆ. ಕೆಲ ದಿನಗಳಲ್ಲೇ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಲಿದೆ ಎಂದು ಮಾಹಿತಿ ನೀಡಿದರು.
ಪಟ್ಟಣದ ಅಭಿವೃದ್ಧಿಗೆ ರಸ್ತೆ ಅಗಲೀಕರಣ ಪ್ರಮುಖವಾಗಿದೆ. ಈಗಾಗಲೇ ಗುರುವಾರಪೇಟೆಯ ರಾಜ್ಯಮಾರ್ಗ ಅಗಲೀಕರಣವಾಗಿದ್ದು, ಇನ್ನು ಅರಳಿಕಟ್ಟೆಯಿಂದ ಗೊಂಬೆ ಗುಡಿವರೆಗೆ ಅಗಲೀಕರಣ ನಡೆಯಲಿದೆ. ಗೊಂಬಿಗುಡಿಯಿಂದ ಸೋಮವಾರಪೇಟೆವರೆಗಿನ ರಸ್ತೆ ಅಗಲೀಕರಣಕ್ಕೆ ಯೋಜನೆ ಸಿದ್ಧವಾಗಿದ್ದು, ಜನರು ಸಹಕಾರ ನೀಡಿದರೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಕಿತ್ತೂರಿಗೆ ಗ್ರೂಪ್​ ಗೃಹ ಯೋಜನೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಕಟ್ಟ ಕಡೆಯ ಜನರಿಗೆ ಯೋಜನೆ ತಲುಪಿಸಬೇಕು. ಪಟ್ಟಣ ಪಂಚಾಯಿತಿಯ ಹೊಸ ಕಟ್ಟಡಕ್ಕೆ 5 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಶ್ರೀವೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ರಾಜ್ಯಮಟ್ಟದ 73 ಕೆಜಿ ಕುಸ್ತಿ ಪಂದ್ಯದಲ್ಲಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಶ್ರೇಯಾ ಸುರೇಶ ಭಾವಣ್ಣವರ ಅವರನ್ನು ಗೌರವಿಸಲಾಯಿತು.
ತಹಸೀಲ್ದಾರ್​ ಕಲಗೌಡ ಪಾಟೀಲ, ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ, ಕಾರ್ಯನಿರ್ವಾಹಕ ಇಂಜಿನಿಯರ್​ ಪ್ರತಿಕ್​ ದಳವಾಯಿ, ಪಪಂ ಅಧ್ಯ ಜಯಸಿದ್ಧರಾಮ ಮಾರಿಹಾಳ, ಉಪಾಧ್ಯೆ ಸಮರಿನ್​ಬಾನು ಸುತಗಟ್ಟಿ, ಪಪಂ ಸ್ಥಾಯಿ ಸಮಿತಿ ಅಧ್ಯ ಎಂ.ಎ್​.ಜಕಾತಿ, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಕಮಿಟಿ ಅಧ್ಯ ಗಂಗಪ್ಪ ಹುರಕಡ್ಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net