ಒಂದೂವರೆ ತಿಂಗಳಲ್ಲಿ 575 ಡೆಂಘೆ ಪತ್ತೆ

Denuge
Published on

ಬೆಂಗಳೂರು: ಮಳೆಗಾಲದಲ್ಲಿ ಕಂಡುಬರುತ್ತಿದ್ದ ಡೆಂಘೆ ಪ್ರಕರಣಗಳು ಬಿರುಬಿಸಿಲಿನಲ್ಲೂ ಕಾಡುತ್ತಿದ್ದು, ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 575 ಪ್ರಕರಣ ದೃಢಪಟ್ಟಿವೆ.

ಚಿತ್ರದುರ್ಗ (79), ಮಂಡ್ಯ (54), ಶಿವಮೊಗ್ಗ (46), ತುಮಕೂರು (42), ಕೊಪ್ಪಳ (41) ಹಾಸನ (34), ದಕ್ಷಿಣ ಕನ್ನಡ (34), ವಿಜಯಪುರ (34) ಜಿಲ್ಲೆಯಲ್ಲಿ ಅಧಿಕ ಪ್ರಕರಣ ವರದಿಯಾಗಿವೆ. ಕಳೆದ ವರ್ಷ 16,500ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಮೃತಪಟ್ಟಿದ್ದರು. ಈ ವರ್ಷದ ಆರಂಭದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ದೃಢಪಟ್ಟಿವೆ.

ಜ್ವರದ ಹಿನ್ನೆಲೆಯಲ್ಲಿ ಈವರೆಗೆ 11,389 ಶಂಕಿತರನ್ನು ಗುರುತಿಸಲಾಗಿದ್ದು, 6,010 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 575 ಮಂದಿ ಸೋಂಕಿಗೆ ಒಳಗಾಗಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಈ ವರ್ಷ ಚಿಕೂನ್‌ಗುನ್ಯಾ ಜ್ವರಕ್ಕೆ ಸಂಬಂಧಿಸಿ 2,151 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, 161 ಮಂದಿಗೆ ಜ್ವರ ದೃಢಪಟ್ಟಿವೆ. 18 ಜಿಲ್ಲೆಗಳಲ್ಲಿ ಪ್ರಕರಣ ವರದಿಯಾಗಿದ್ದು, ಶಿವಮೊಗ್ಗದಲ್ಲಿ 35 ಪ್ರಕರಣಗಳು ಖಚಿತಪಟ್ಟಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net