

ಬೆಂಗಳೂರು : ರಾಜ್ಯದಲ್ಲಿ ಬುಧವಾರ 201 ಕೋವಿಡ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿಗೆ ಒಳಗಾಗಿದ್ದ ಮೈಸೂರು ಜಿಲ್ಲೆ ನಿವಾಸಿ 85 ವರ್ಷದ ವೃದ್ಧ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 7,315 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 121, ತುಮಕೂರಿನಲ್ಲಿ 14, ಮೈಸೂರಿನಲ್ಲಿ 10 ಸೇರಿ 201 ಪ್ರಕರಣಗಳು ವರದಿಯಾಗಿವೆ. 257 ಸೋಂಕಿತರು ಗುಣ ಹೊಂದಿರುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 974 ತಲುಪಿದೆ.
ಸೋಂಕಿತರಲ್ಲಿ 915 ಮಂದಿ ಮನೆ ಆರೈಕೆಯಲ್ಲಿದ್ದು, 59 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ 45 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ, 12 ಮಂದಿ ತುರ್ತು ನಿಗಾ ಘಟಕದಲ್ಲಿ ಹಾಗೂ ಇಬ್ಬರು ಐಸಿಯುನಲ್ಲಿ ವೆಂಟಿಲೇಟರ್ ವ್ಯವಸ್ಥೆಯಡಿ ಚಿಕಿತ್ಸೆ ಪಡೆಯುತ್ತಿದ್ದಾರೆ.