ರಾಜ್ಯದಲ್ಲಿ ಕುಸಿದ ವಿದ್ಯುತ್ ಬೇಡಿಕೆ ಬೇಸಿಗೆಗೆ ಬಾದಿಸದು ವಿದ್ಯುತ್ ಸಮಸ್ಯೆ

Published on

ಬೆಂಗಳೂರು:

ರಾಜ್ಯದಲ್ಲಿ ಮಳೆಯ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಬೇಸಿಗೆಯಲ್ಲಿ 14 ರಿಂದ 16 ಸಾವಿರ ಮೆಗಾವ್ಯಾಟ್ (ಮೆವಾ) ಹಿಗ್ಗಿದ್ದ ವಿದ್ಯುತ್ ಬೇಡಿಕೆ, ಈಗ 9 ರಿಂದ 10 ಸಾವಿರ ಮೆವಾಗೆ ತಗ್ಗಿದೆ.

ಈ ಬಾರಿ ಜಲಾಶಯಗಳಲ್ಲಿ ಉತ್ತಮ ನೀರಿನ ಸಂಗ್ರಹ ಇರುವುದರಿಂದ ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಸಮಸ್ಯೆ ಬಾದಿಸುವುದಿಲ್ಲ ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಸ್ಕಾಂನಲ್ಲಿ 470 ಮೆವಾ, ಹೆಸ್ಕಾಂ-1253, ಸೆಸ್ಕ್-992, ಜೆಸ್ಕಾಂ-926, ಮೆಸ್ಕಾಂನಲ್ಲಿ 780 ಮೆವಾ ವಿದ್ಯುತ್ ಬೇಡಿಕೆ ಇತ್ತು.

ಶರಾವತಿಯಲ್ಲಿ 884 ಮೆವಾ, ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್) 885 ಮೆವಾ, ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ (ಬಿಟಿಪಿಎಸ್) 854 ಮೆವಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸೋಲಾರ್ ಮತ್ತು ಪವನ ವಿದ್ಯುತ್ ಉತ್ಪಾದನೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದ್ದು, ಬೇಡಿಕೆ ಅನುಸಾರ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net