19ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ

State Level Dance Competition
Published on

ಶಿವಮೊಗ್ಗ: ಶ್ರೀ ಪಾಲಚಂದ್ರ ಡಾನ್ಸ್ ಇನ್‌ಸ್ಟಿಟ್ಯೂಟ್ ಆಫ್ ಶಿವಮೊಗ್ಗ ಮತ್ತು ಶಿವ ತಾಂಡವ ನೃತ್ಯ ಸಂಸ್ಥೆಯಿಂದ ಕುವೆಂಪು ರಂಗಮಂದಿರದಲ್ಲಿ ಅ.19ರಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ರಾಜ್ಯಮಟ್ಟದ ಪುನೀತ್ ರಾಜಕುಮಾರ್ ಕಪ್ ನೃತ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ನೃತ್ಯಗುರು ದೀಪು ಹೇಳಿದರು.

ಸಬ್ ಜೂನಿಯರ್ ಸೋಲೋ (3ರಿಂದ 6 ವರ್ಷ), ಜೂನಿಯರ್ ಸೋಲೋ (7ರಿಂದ 14 ವರ್ಷ), ಸೀನಿಯರ್ ಸೋಲೋ (14 ವರ್ಷ ಮೇಲ್ಪಟ್ಟು) ಹಾಗೂ ಗುಂಪು ನೃತ್ಯ(ವಯಸ್ಸಿನ ಮಿತಿ ಇಲ್ಲ) ಸೇರಿ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಗ್ಗೆ 9.30ಕ್ಕೆ ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಸ್ಪರ್ಧೆ ಉದ್ಘಾಟಿಸುವರು. ಪಾಲಿಕೆ ಮಾಜಿ ಸದಸ್ಯೆ ಸುರೇಖಾ ಮುರಳೀಧರ್, ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಚ್.ಅರುಣ್‌ಬಾಬು ಉಪಸ್ಥಿತರಿರುವರು. ಸಂಜೆ 5ಕ್ಕೆ ಸಮಾರೋಪ ಸಮಾರಂಭದಲ್ಲಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿ ಡಿ.ಎಸ್.ಅರುಣ್, ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪತ್ರಕರ್ತ ಸೂರ್ಯನಾರಾಯಣ್ ಮತ್ತಿತರರು ಪಾಲ್ಗೊಳ್ಳುವರು ಎಂದರು.

ಸಬ್ ಜೂನಿಯರ್ ಸೋಲೋಗೆ ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಇರಲಿದೆ. ಜೂನಿಯರ್ ಸೋಲೋಗೆ ಪ್ರಥಮ 8 ಸಾವಿರ ರೂ., ದ್ವಿತೀಯ 5 ಸಾವಿರ ರೂ., ಸೀನಿಯರ್ ಸೋಲೋಗೆ ಪ್ರಥಮ 10 ಸಾವಿರ ರೂ., ದ್ವಿತೀಯ 7 ಸಾವಿರ ರೂ., ಗುಂಪು ನೃತ್ಯಕ್ಕೆ ಪ್ರಥಮ 30 ಸಾವಿರ ರೂ., ದ್ವಿತೀಯ 20 ಸಾವಿರ ರೂ. ಮತ್ತು ತೃತೀಯ 10 ಸಾವಿರ ರೂ. ಬಹುಮಾನ, ಟ್ರೋಫಿ ಮತ್ತು ಪ್ರಶಸ್ತಿ ಪತ್ರ ಇರಲಿದೆ ಎಂದು ತಿಳಿಸಿದರು. ನೃತ್ಯ ಕಲಾವಿದರಾದ ಶಶಿ, ಸಚಿನ್, ಸಿಂಧು, ನಂದನ್, ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net