24ರಿಂದ ವೈದ್ಯರ ರಾಜ್ಯಮಟ್ಟದ ಸಮ್ಮೇಳನ

ಗಂಗಾವತಿಯ ಐಎಂಎ ಭವನದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ರಾಜ್ಯಮಟ್ಟದ ಸಮ್ಮೇಳನದ ವಿಶೇಷ ಸಭೆಯಲ್ಲಿ ಐಎಂಎ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್ ಮಾತನಾಡಿದರು. ತಾಲೂಕಾಧ್ಯಕ್ಷ ಡಾ.ಎ.ಎಸ್.ಎನ್.ರಾಜು, ಸಂ.ಕಾರ್ಯದರ್ಶಿ ಡಾ.ಕೆ.ಅಮರೇಶ ಪಾಟೀಲ್ ಇತರರಿದ್ದರು.
ಗಂಗಾವತಿಯ ಐಎಂಎ ಭವನದಲ್ಲಿ ಹಮ್ಮಿಕೊಂಡಿದ್ದ ವೈದ್ಯರ ರಾಜ್ಯಮಟ್ಟದ ಸಮ್ಮೇಳನದ ವಿಶೇಷ ಸಭೆಯಲ್ಲಿ ಐಎಂಎ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್ ಮಾತನಾಡಿದರು. ತಾಲೂಕಾಧ್ಯಕ್ಷ ಡಾ.ಎ.ಎಸ್.ಎನ್.ರಾಜು, ಸಂ.ಕಾರ್ಯದರ್ಶಿ ಡಾ.ಕೆ.ಅಮರೇಶ ಪಾಟೀಲ್ ಇತರರಿದ್ದರು.
Published on

ಗಂಗಾವತಿ: ವೈದ್ಯಕೀಯ ವೃತ್ತಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಲು ವೈದ್ಯಕೀಯ ಸಂಘ ಬದ್ಧವಾಗಿದ್ದು, ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷ ಡಾ.ವಿ.ವಿ.ಚಿನಿವಾಲರ್ ಹೇಳಿದರು.

ನಗರದ ಐಎಂಎ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವೈದ್ಯರ ರಾಜ್ಯಮಟ್ಟದ ಸಮ್ಮೇಳನದ ವಿಶೇಷ ಸಭೆಯಲ್ಲಿ ಮಾತನಾಡಿದರು. ವೈದ್ಯ ವೃತ್ತಿ ಕೇವಲ ಸೇವೆಯಲ್ಲ, ಸಮಾಜದ ಆರೋಗ್ಯ ಮತ್ತು ನಂಬಿಕೆ ಕಾಪಾಡುವ ಪವಿತ್ರ ಹೊಣೆಗಾರಿಕೆ. ಸಮ್ಮೇಳದ ಮೂಲಕ ವೈದ್ಯರನ್ನು ಒಗ್ಗೂಡಲಾಗುತ್ತಿದ್ದು, ಚಿಂತನೆ, ಸಂವಾದ ಮತ್ತು ಸೃಜನಾತ್ಮಕ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ಸಂ.ಕಾರ್ಯದರ್ಶಿ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿ, ನಗರದ ಅಮರ್ ಗಾರ್ಡ್‌ನಲ್ಲಿ ಅ.24ರಿಂದ 26ರವರಿಗೆ 91ನೇ ಕಿಷ್ಕಿಂದಾ ಮೆಡಿಕಾನ್ 2025 ರಾಜ್ಯ ಮಟ್ಟದ ಸಮ್ಮೇಳನ ಆಯೋಜಿಸಿದ್ದು, ಈಗಾಗಲೇ ಸಾವಿರಕ್ಕೂ ಅಧಿಕ ವೈದ್ಯರು ನೋಂದಣಿ ಮಾಡಿಸಿದ್ದಾರೆ. ಸ್ವಸ್ಥ ವೈದ್ಯ, ಸ್ವಸ್ಥ ಸಮಾಜ ಪರಿಕಲ್ಪನೆಯಡಿ ಕಾರ್ಯಕ್ರಮ ನಡೆಯಲಿದೆ. ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ದಿಲೀಪ್ ಭಾನುಶಾಲಿ, ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಆಗಮಿಸಲಿದ್ದಾರೆ. ವೈದ್ಯ ವೃತ್ತಿಯ ಬಗ್ಗೆ ವಿಚಾರ ಸಂಕೀರಣ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದ ಉದ್ದೇಶ ಮತ್ತು ರೂಪುರೇಷೆಯ ಕುರಿತು ಐಎಂಎ ತಾಲೂಕಾಧ್ಯಕ್ಷ ಡಾ.ಎ.ಎಸ್.ಎನ್.ರಾಜು ಮಾತನಾಡಿದರು. ಸಂಘದ ಕಾರ್ಯಾಧ್ಯಕ್ಷ ಡಾ.ಎಚ್.ಮಲ್ಲನಗೌಡ, ಖಜಾಂಚಿ ಡಾ.ಬಸವರಾಜ ಸಿಂಗನಾಳ್, ಸದಸ್ಯ ಡಾ.ಕೆ.ಎನ್.ಮಧುಸೂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net