ರಾಜ್ಯಮಟ್ಟದ ಚೆಸ್​ ಚಾಂಪಿಯನ್​ಶಿಪ್​ ಏ. 25ರಿಂದ

je721538035802367-abc
Published on

ರಾಣೆಬೆನ್ನೂರ: ಜಿಲ್ಲಾ ಚೆಸ್​ ಅಸೋಸಿಯೇಷನ್​ ಹಾಗೂ ಖನ್ನೂರ ವಿದ್ಯಾನಿಕೇತನ ಸಮೂಹ ಸಂಸ್ಥೆಗಳ ವತಿಯಿಂದ ಏ. 25ರಿಂದ 27ರವರೆಗೆ ನಗರದ ಶ್ರೀನಿವಾಸ ಕಾಕಿಯವರ ಜೇಸಿವಾಣಿ ಅರಮನೆಯಲ್ಲಿ ರಾಜ್ಯಮಟ್ಟದ ಅಂಡರ್​&9 ಓಪನ್​ ಮತ್ತು ಅಂಡರ್​&-9 ಬಾಲಕಿಯರ ಚೆಸ್​ ಚಾಂಪಿಯನ್​ಶಿಪ್​ ಆಯೋಜಿಸಲಾಗಿದೆ.

ರಾಜ್ಯಾದ್ಯಂತದ 160ಕ್ಕೂ ಅಧಿಕ ಚೆಸ್​ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಜೇತರು ರಾಷ್ಟ್ರ ಮಟ್ಟಕ್ಕೆ ಅರ್ಹತೆ ಪಡೆಯುವ ಅವಕಾಶವಿದೆ ಎಂದು ಖನ್ನೂರ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಪ್ರವಿಣ ಖನ್ನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net