ಮೈಸೂರು: ರಾಜ್ಯ ಸರ್ಕಾರ ಹೊರಗುತ್ತಿಗೆ ನೇಮಕಾತಿಗಳಲ್ಲಿ ಇರುವ ಷರತ್ತು ವಾಪಸ್ ಪಡೆಯಬೇಕು ಎಂದು ರಾಜ್ಯ ನಾಯಕರು ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ ಒತ್ತಾಯಿಸಿದರು.
ಎಸ್ಸಿ, ಎಸ್ಟಿ ವರ್ಗಕ್ಕೆ ಮೀಸಲಾತಿ ನೀಡಿರುವುದು ಸ್ವಾಗತಾರ್ಹ. ಆದರೆ, ಈ ವೇಳೆ 45 ದಿನಗಳಿಗಿಂತ ಕಡಿಮೆ ಅವಧಿಯ ಹೊರಗುತ್ತಿಗೆ ನೇಮಕಾತಿಗೆ ಮತ್ತು 20ಕ್ಕಿಂತ ಕಡಿಮೆ ಅಭ್ಯರ್ಥಿಗಳ ನೇಮಕಾತಿ ವೇಳೆ ಈ ಆದೇಶ ಅನ್ವಯಿಸುವುದಿಲ್ಲ ಎಂಬ ಷರತ್ತು ವಿಧಿಸಿರುವುದು ಸರಿಯಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹಲವು ವರ್ಷಗಳಿಂದ ನೇಮಕಾತಿ ವೇಳೆ ಮೀಸಲಾತಿ ಪಾಲನೆ ಮಾಡದೇ ಎಸ್ಸಿ, ಎಸ್ಟಿ ಸಮುದಾಯದ ಲಕ್ಷಾಂತರ ಯುವಜನರಿಗೆ ಅನ್ಯಾಯವಾಗಿದೆ. ಹೀಗಾಗಿ ಸರ್ಕಾರದ ಮೀಸಲಾತಿ ಆದೇಶದ ನ್ಯಾಯ ದೊರಕಿಸುವಂತಿದೆ. ಈ ವೇಳೆ 45 ದಿನಗಳಿಗಿಂತ ಕಡಿಮೆ ಅವಧಿ ಹಾಗೂ 20ಕ್ಕಿಂತ ಕಡಿಮೆ ನೇಮಕ ವೇಳೆ ಅನ್ವಯಿಸುವುದಿಲ್ಲ ಎಂಬ ಷರತ್ತು ಸರಿಯಲ್ಲ. ಆದ್ದರಿಂದ ಮರು ಸುತ್ತೋಲೆ ಹೊರಡಿಸಬೇಕು ಎಂದು ಕೋರಿದರು.
ಪದಾಧಿಕಾರಿಗಳಾದ ಪ್ರಭಾಕರ ಹುಣಸೂರು, ರಾಜು ಮಾರ್ಕೆಟ್, ಸುರೇಶ್ ಕುಮಾರಬೀಡು, ಜಿ.ಡಿ.ಸ್ವಾಮಿ ಇದ್ದರು.