

ಬೆಂಗಳೂರು: ನೆಟ್ಟಕಲ್ಲಪ್ಪ ಈಜು ಕೇಂದ್ರ (ಎನ್ಎಸಿ) ಮತ್ತು ಬಸವನಗುಡಿ ಈಜು ಕೇಂದ್ರ (ಬಿಎಸಿ) ತಂಡಗಳು ಎನ್ಆರ್ಜೆ ರಾಜ್ಯ ಜೂನಿಯರ್ ವಾಟರ್ಪೋಲೋ ಚಾಂಪಿಯನ್ಷಿಪ್ನಲ್ಲಿ (
state junior water polo championship
) ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.
ಬಾಲಕರ ವಿಭಾಗದಲ್ಲಿ ಬಿಎಸಿ ದ್ವೀತಿಯ ಮತ್ತು ಸ್ಟಾರ್ ಅಕ್ವಟಿಕ್ಸ್ ತೃತೀಯ ಸ್ಥಾನ ಗಳಿಸಿತು. ಬಾಲಕಿಯರಲ್ಲಿ ಎನ್ಎಸಿ ದ್ವೀತಿಯ ಮತ್ತು ಸ್ಟಾರ್ ಅಕ್ವಟಿಕ್ಸ್ ತೃತೀಯ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಎನ್ಎಸಿಯ ಧ್ಯಾನ್ ನಾಯ್ಡು ಅತ್ಯುತ್ತಮ ಆಟಗಾರ ಮತ್ತು ಬಾಲಕಿಯರ ವಿಭಾಗದಲ್ಲಿ ಬಿಎಸಿಯ ಇಶಾನಿ ಕಿರಣ್ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಪಡೆದರು. ಬಾಲಕರ ವಿಭಾಗದಲ್ಲಿ ಸ್ವಿಮ್ಲೈಫ್ನ ವಿಶ್ರುತ್ ಮತ್ತು ಬಾಲಕಿಯರ ವಿಭಾಗದಲ್ಲಿ ಬಿಎಸಿಯ ಗೌರಿ ತೇಜಸ್ ಅತ್ಯುತ್ತಮ ಗೋಲುಕೀಪರ್ ಪ್ರಶಸ್ತಿ ಸ್ವೀಕರಿಸಿದರು.