ಜಾತಿ ಗಣತಿ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ; ಸಿ.ಟಿ.ರವಿ ಪ್ರತಿಪಾದನೆ

CT Ravi
Published on

ಬೆಂಗಳೂರು: ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಇಲ್ಲ. ಸಮೀಕ್ಷೆ ಹೆಸರಿನಲ್ಲಿ ಬಹು ಕೋಟಿ ರೂ. ಖರ್ಚಾಗಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರತಿಪಾದಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸಂಬಂಧ ಜಾತಿ ಸಮೀಕ್ಷೆ ಆಗಬೇಕು. ಇರುವ ತಾಂತ್ರಿಕತೆಯನ್ನು ಬಳಸಿಕೊಂಡು ವೈಜ್ಞಾನಿಕ, ಕ್ರಮಬದ್ಧ ಸಮೀಕ್ಷೆ ನಡೆಸಬೇಕು ಎಂದರು.

ಆಡಳಿತದ ವೈಲ್ಯ ಮುಚ್ಚಿಹಾಕಲು ಮಾಡಲು, ರಾಜಕೀಯ ಲಾಭಕ್ಕಾಗಿ ಕಾಂತರಾಜು ವರದಿಯನ್ನು ಬಳಸಿಕೊಳ್ಳಬಾರದು. ತುಳಿತಕ್ಕೆ ಒಳಗಾದ ಜನರು ರಾಜಕೀಯದ ುಟ್ಬಾಲ್ ಆಗಬಾರದು ಎಂದು ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಗುವನ್ನು ಜಿಗುಟಿ ಅಳಿಸಿ ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಸಿಎಂ ವರದಿ ಪರವಾಗಿದ್ದರೆ, ಡಿಸಿಎಂಗೆ ಸಹಮತವಿಲ್ಲ. ಸಿಎಂ ತೀರ್ಮಾನ ಇಷ್ಟವಿಲ್ಲವೆಂದಾದರೆ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಸಿ.ಟಿ.ರವಿ ಛೇಡಿಸಿದರು.

ವೈಜ್ಞಾನಿಕ ಸಮೀಕ್ಷೆಗೆ ಪಟ್ಟು

ಲಭ್ಯ ಮಾಹಿತಿ ಪ್ರಕಾರ ಕಾಂತರಾಜು ವರದಿಯಲ್ಲಿ ಒಂದೂವರೆ ಕೋಟಿ ಜನರ ವಿವರಗಳು ದಾಖಲಾಗಿಲ್ಲ. ಭಾರಿ ಪ್ರಮಾಣದಲ್ಲಿ ಜನರು ಬಿಟ್ಟು ಹೋದರೆ ಸಮೀಕ್ಷೆ ವೈಜ್ಞಾನಿಕವೆಂದು ಹೇಳಲು ಸಾಧ್ಯವೆ ? ಎಂದು ಪ್ರಶ್ನಿಸಿದರು.

ಸಮರ್ಪಕ, ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿಲ್ಲವೆಂಬ ಕಾರಣಕ್ಕೆ ವೀರಶೈವ-ಲಿಂಗಾಯತ, ಒಕ್ಕಲಿಗ ಸಮುದಾಯಗಳು ಆಕ್ಷೇಪಿಸಿವೆ. ಜಾತಿ ಗಣತಿ ವೈಜ್ಞಾನಿಕವಾಗಿ ನಡೆಸಬೇಕೆಂದು ಪಟ್ಟು ಹಿಡಿದಿವೆ. ಈ ಸರ್ಕಾರಕ್ಕೆ ಕಾಳಜಿಯಿದ್ದರೆ ವೈಜ್ಞಾನಿಕ, ಕ್ರಮಬದ್ಧವಾಗಿ ನಡೆಸಬೇಕು ಎಂದು ಸವಾಲೆಸೆದರು.

ಸದ್ಯಕ್ಕೆ ಕಾಂತರಾಜು ವರದಿಯು ಆರ್‌ಬಿಐ ಗವರ್ನರ್ ಸಹಿಯಿಲ್ಲದ ನೋಟಿದ್ದಂತೆ. ಸಹಿಯಿದ್ದರೆ ಮಾತ್ರ ಇಲ್ಲವೆಂದಾದರೆ ರದ್ದಿ ಪೇಪರ್ ಆಗುತ್ತದೆ. ಹಾಗೇ ಆಗಿದೆ ಎಂದು ಸಿ.ಟಿ.ರವಿ ವಿಶ್ಲೇಷಿಸಿದರು.

ಪಕ್ಷದಿಂದ ಹುದ್ದೆಗಳಿಗೆ ನೇಮಕ ಸಂದರ್ಭದಲ್ಲಿ ಅವಕಾಶ ವಂಚಿತ ಸಣ್ಣ ಸಮುದಾಯಗಳಿಗೆ ಆದ್ಯತೆ ನೀಡಬೇಕು ಎಂಬ ಬೇಡಿಕೆಯನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net