

ಬೆಂಗಳೂರು: ಚುನಾವಣಾ ಸಮಯ ಹತ್ತಿರುವಾಗುತ್ತಿದ್ದಂತೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ವಿವಿಧ ಶ್ರೇಣಿಯ ಅಧಿಕಾರಗಳ ವರ್ಗಾವಣೆ ಜೋರಾಗಿಯೇ ನಡೆಯುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಐಪಿಎಸ್, ಡಿವೈಎಸ್ಪಿ, ಇನ್ಸ್ಪೆಕ್ಟರ್ ಶ್ರೇಣಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ನಡೆದಿತ್ತು. ಇದೀಗ ರಾಜ್ಯದ 13 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ನೂತನ ಆದೇಶ ಹೊರಡಿಸಿದೆ.
ಈ ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದುಸೂಚಿಸಲಾಗಿದ್ದು, ಈ ಕೆಳಗಿನ ಪಟ್ಟಿಯಲ್ಲಿ ವರ್ಗಾವಣೆ ಆಗಿರುವ ಡಿವೈಎಸ್ಪಿಗಳು ಮತ್ತು ಅವರ ಹೊಸ ಕಾರ್ಯಸ್ಥಾನಗಳನ್ನು ನಮೂದಿಸಲಾಗಿದೆ.