ನ್ಯಾಯದೊರಕಿಸುವಲ್ಲಿ ರಾಜ್ಯ ಸರ್ಕಾರ ವಿಫಲ

State government fails to deliver justice
ಜಮಖಂಡಿ ನಗರದ ಕಾನಿಪ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ನದಾ-ಪಿಂಜಾರ ಸಂಘದ ರಾಜ್ಯ ಸದಸ್ಯ ಮೌಲಾಸಾಬ ನದಾ ಮಾತನಾಡಿದರು. ಝಾಕೀರಹುಸೇನ ನದಾ, ಹಾಜಿ ಸಾಹೇಬಲಾಲ ನದಾ, ಚಾಂದಸಾಬ ನದಾ, ರಾಜೇಸಾಬ ನದಾ, ಮಲಿಕಸಾಬ ನದಾ, ಗೈಬುಸಾಬ ನದಾ, ಅಪ್ಪಾಸಾಬ ನದಾ, ಜಾವೀದಲಿ ದಳವಾಯಿ ಇದ್ದರು.
Published on

ಜಮಖಂಡಿ: ಅಲ್ಪಸಂಖ್ಯಾತರಲ್ಲೆ ಹಿಂದುಳಿದ ನದಾ-ಪಿಂಜಾರ ಸಮುದಾಯಕ್ಕೆ ನ್ಯಾಯದೊರಕಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಕರ್ನಾಟಕ ರಾಜ್ಯ ನದಾ-ಪಿಂಜಾರ ಸಂಘದ ರಾಜ್ಯ ಸದಸ್ಯ ಮೌಲಾಸಾಬ ನದಾ ಆರೋಪಿಸಿದರು.

ನಗರದ ಕಾನಿಪ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಸಂಕಷ್ಟಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರುಗಳಿಗೆ ಮನವಿ ಸಲ್ಲಿಸಿದಾಗ ಬಜೆಟ್ ಅಧಿವೇಶನದಲ್ಲಿ ಅನುದಾನ ನೀಡುವುದಾಗಿ ತಿಳಿಸಿದ್ದರು. ಆದರೆ, ಇನ್ನುವರೆಗೂ ಯಾವುದೇ ಅನುದಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸುಮಾರ 25 ಲಕ್ಷ ಜನಸಂಖ್ಯೆ ಹೊಂದಿರುವ ನದಾ-ಪಿಂಜಾರ ಸಮಾಜವು ಅತ್ಯಂತ ಹಿಂದುಳಿದ ಸಮಾಜವಾಗಿದೆ. ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸದಿದ್ದರೆ, ಬೆಂಗಳೂರು ಚಲೋ ಹೋರಾಟ ರೂಪಿಸಲಾಗುವುದು ಎಂದರು.

ತಾಲೂಕು ಉಪಾಧ್ಯಕ್ಷ ಝಾಕೀರಹುಸೇನ ನದಾ ಮಾತನಾಡಿ, ನದಾ-ಪಿಂಜಾರ ಸಮಾಜದವರು ಆರ್ಥಿಕವಾಗಿ ಬಹಳ ಹಿಂದುಳಿದಿದ್ದು, ಅಭಿವೃದ್ಧಿಗಾಗಿ ನಿಗಮಕ್ಕೆ ಅನುದಾನ ನೀಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯಪ್ರತಿನಿಧಿ ಹಾಜಿ ಸಾಹೇಬಲಾಲ ನದಾ, ತಾಲೂಕಾಧ್ಯಕ್ಷ ಚಾಂದಸಾಬ ನದಾ, ಉಪಾಧ್ಯಕ್ಷ ರಾಜೇಸಾಬ ನದಾ, ಮಲಿಕಸಾಬ ನದಾ, ಗೈಬುಸಾಬ ನದಾ, ಅಪ್ಪಾಸಾಬ ನದಾ, ಜಾವೀದಲಿ ದಳವಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net