ಎಣ್ಣೆ ಪ್ರಿಯರಿಗೆ ಇಲ್ಲಿದೆ ಗುಡ್​ ನ್ಯೂಸ್​: ಸೋಮವಾರದಿಂದ ಮದ್ಯ ಮಾರಾಟಕ್ಕೆ ಸಿಕ್ತು ಅನುಮತಿ

Alchol 2 May 20
Published on

ಬೆಂಗಳೂರು: ಅಂತೂ ರಾಜ್ಯದಲ್ಲಿ ಎಣ್ಣೆಪ್ರಿಯರು ಇನ್ಮುಂದೆ ನಿರಾಳವಾಗಿರಬಹುದು. ಮೂರನೇ ಹಂತದ ಲಾಕ್​ಡೌನ್​ನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಸಿಕ್ಕಿದೆ..!

ಇಂದು ರಾಜ್ಯ ಅಬಕಾರಿ ಆಯುಕ್ತರು ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿರುವುದಾಗಿ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮೇ 4 (ಸೋಮವಾರ)ರಿಂದ ರಾಜ್ಯದ ಕಂಟೇನ್​ಮೆಂಟ್​ ವಲಯಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆ ಎಂಎಸ್​ಐಎಲ್​ ಮಳಿಗೆಗಳಲ್ಲಿ ಎಣ್ಣೆ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಎಂಎಸ್​ಐಎಲ್​ ಮದ್ಯ ಮಳಿಗೆಗಳಾದ ಸಿಎಲ್​-2, ಸಿಎಲ್​ 11-ಸಿ ಗಳು ಬೆಳಗ್ಗೆ 9ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರಬೇಕು. ಕೇಂದ್ರ, ರಾಜ್ಯ, ಜಿಲ್ಲೆ ಮತ್ತು ಆಯಾ ಸ್ಥಳೀಯ ಆಡಳಿತಗಳಿಂದ ಕಂಟೇನ್​ಮೆಂಟ್ ವಲಯಗಳು ಎಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಯಾವ ಕಾರಣಕ್ಕೂ ಎಣ್ಣೆ ಸಿಗೋದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net