ರಾಜ್ಯದ ಐದನೇ ಹಣಕಾಸು ಆಯೋಗ ರಚನೆ; ವರದಿಗೆ ಗಡುವು ನಿಗದಿ

Former MP Narayanaswamy appointed
Published on

ಬೆಂಗಳೂರು: ಮಾಜಿ ಸಂಸದ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರನ್ನು ರಾಜ್ಯದ 5ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಆಯೋಗದ ಸದಸ್ಯರಾಗಿ ನಿವೃತ್ತ ಐಎಎಸ್ ಅಧಿಕಾರಿ ಮೊಹಮದ್ ಸನಾವುಲ್ಲಾ ಹಾಗೂ ನಿವೃತ್ತ ನಿಯಂತ್ರಕ ಆರ್.ಎಸ್.ಪಾಂಡೆ ನೇಮಕವಾಗಿದ್ದಾರೆ. ಆಯೋಗದ ಅಧ್ಯಕ್ಷ ಹಾಗೂ ಸದಸ್ಯರ ಜವಾಬ್ದಾರಿ ಪೂಣಾವಧಿಯದಾಗಿದೆ. ಸಂಭಾವನೆ ಮತ್ತು ಭತ್ಯೆಯನ್ನು ಸರ್ಕಾರ ನಿಗದಿಪಡಿಸಲಿದೆ.

ಜವಾಬ್ದಾರಿ ಏನು ?

ರಾಜ್ಯ ಸರ್ಕಾರ ಹಾಗೂ ನಗರ-ಗ್ರಾಮೀಣ ಸ್ಥಳೀಯ ಸಂಸ್ಥೆಗಳ ನಡುವೆ ಕ್ರೋಡೀಕೃತ ಸಂಪನ್ಮೂಲ ಹಂಚಿಕೆ, ಸರ್ಕಾರ ವಿಧಿಸುವ ತೆರಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಪಾಲು ನಿಗದಿ, ತೆರಿಗೆ ಸಂಗ್ರಹದ ಮೂಲಗಳ ವ್ಯಾಪ್ತಿ ನಿಗದಿ, ಆರ್ಥಿಕ ದಕ್ಷತೆ ಮುಂತಾದವುಗಳ ಅಧ್ಯಯನ ನಡೆಸಿ ಶಿಾರಸು ಮಾಡುವುದು ಆಯೋಗದ ಪ್ರಮುಖ ಜವಾಬ್ದಾರಿಯಾಗಿದೆ.

ಸ್ಥಳೀಯ ಸಂಸ್ಥೆಗಳ ವೆಚ್ಚಗಳ ಸರಿದೂಗಿಸಲು ಕೈಗೊಳ್ಳಬೇಕಾದ ಆರ್ಥಿಕ ಸಂಪನ್ಮೂಲ ಸುಧಾರಣೆ ಕ್ರಮಗಳು, ಸರ್ಕಾರಕ್ಕೆ ಬಾಕಿ ಮರುಪಾವತಿ, ಭವಿಷ್ಯದ ಹಂಚಿಕೆ ಇನ್ನಿತರ ಅಂಶಗಳ ಬಗ್ಗೆಯೂ ಅಧ್ಯಯನ ನಡೆಸಿ ಆಯೋಗವು ಸಲಹೆ ನೀಡಬಹುದಾಗಿದೆ.

ರಾಜ್ಯ ಸರ್ಕಾರದ ಆರ್ಥಿಕ ಸಂಪನ್ಮೂಲಗಳ ಕ್ರೋಡೀಕರಣ, ಬೇಡಿಕೆ, ನಾಗರಿಕ ಆಡಳಿತ ವೆಚ್ಚ, ಸಾಲ ವ್ಯವಸ್ಥೆ, ಅಭಿವೃದ್ದಿ ಮತ್ತು ಬದ್ಧತಾ ವೆಚ್ಚಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ವಿಚಾರಗಳ ಕುರಿತು ಆಯೋಗ ಶಿಾರಸು ಮಾಡಬಹುದಾಗಿದ್ದು, 2024ರ ೆ.28ಕ್ಕೆ ವರದಿ ಸಲ್ಲಿಸಬೇಕೆಂದು ಆರ್ಥಿಕ ಇಲಾಖೆ (ಜಿ.ಪಂ.) ಹೊರಡಿಸಿದ ಆದೇಶದಲ್ಲಿ ಆಯೋಗಕ್ಕೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net