

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ಸಿಬ್ಬಂದಿ ಹಾಗೂ ಗ್ರಂಥಪಾಲಕರ ಗೌರವಧನ 1,000 ರೂ. ಹೆಚ್ಚಳ; ಗೃಹರಕ್ಷಕರ ಕರ್ತವ್ಯ ಭತ್ಯೆ ದಿನಕ್ಕೆ 100 ರೂ. ಹೆಚ್ಚಳ. ನೋಂದಾಯಿತ 35 ಜನರಿಗೆ ಅನುಕೂಲ; ಪ್ರವಾಸಿ ಗೈಡ್ಗಳ ಪ್ರೋತ್ಸಾಹಧನ 5,000 ರೂ.ಗೆ ಹೆಚ್ಚಳ; ಗೃಹಿಣಿ ಶಕ್ತಿ ಯೋಜನೆಯಡಿ ಯಲ್ಲಿ ಭೂರಹಿತ ಮಹಿಳಾ ಕೃಷಿ ಕಾರ್ವಿುಕರಿಗೆ ಶ್ರಮಶಕ್ತಿ ಹೆಸರಲ್ಲಿ ಮಾಸಿಕ 500 ರೂ. ಸಹಾಯಧನ
ಬಜೆಟ್ ಗಾತ್ರ: 3,03,910 ಕೋಟಿ ರೂ.; ತಲಾ ಆದಾಯ ಏರಿಕೆ: 2.04 ರಿಂದ 3.32 ಲಕ್ಷ.
‘ಭೂಸಿರಿ’ ಯೋಜನೆಯಡಿಯಲ್ಲಿ 10 ಸಾವಿರ ರೂ. ಹೆಚ್ಚುವರಿ ಸಹಾಯಧನ;‘ರೈತ ಉನ್ನತಿ ಯೋಜನೆ’ಯಡಿ ರೈತ ಉತ್ಪಾದಕ ಸಂಸ್ಥೆಗಳಿಗೆ 10 ಲಕ್ಷ ರೂ.ವರೆಗಿನ ಬಂಡವಾಳಕ್ಕೆ ಬಡ್ಡಿ ಸಹಾಯಧನ; ಸಿರಿಧಾನ್ಯ ಉತ್ಪಾದನೆ ಉತ್ತೇಜನಕ್ಕೆ ಹೆಕ್ಟೇರ್ಗೆ 10 ಸಾವಿರ ರೂ. ನೀಡುವ ‘ರೈತ ಸಿರಿ’
ಜುಲೈವರೆಗೆ ಲೇಖಾನುದಾನ: ಆಯವ್ಯಯ ಅಂದಾಜಿನಂತೆ 2023-24ನೇ ಆರ್ಥಿಕ ಸಾಲಿನ 2023ರ ಜುಲೈ 31ರವರೆಗಿನ ವೆಚ್ಚವನ್ನು ನಿರ್ವಹಿಸಲು ಸಿಎಂ ಲೇಖಾನುದಾನ ಕೋರಿದರು.
ಮುಖ್ಯಮಂತ್ರಿ ವಿದ್ಯಾಶಕ್ತಿ: ಸರ್ಕಾರಿ ಪಿಯು ಹಾಗೂ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯ್ತಿ; ‘ಹಳ್ಳಿ ಮುತ್ತು’ ಯೋಜನೆಯಡಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ 500 ಸಿಇಟಿ ಟಾಪರ್ಗಳಿಗೆ ಕೆಇಎಯಿಂದ ಪೂರ್ಣ ಶುಲ್ಕ ಪಾವತಿ
ನಿರುದ್ಯೋಗಿಗಳಿಗೆ ಭತ್ಯೆ: ಪದವಿ ಮುಗಿಸಿ ಮೂರು ವರ್ಷವಾದರೂ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸಲು 2000 ರೂ. ನೆರವು
ಮನೆ ಬಾಗಿಲಿಗೆ ಜನಸೇವಕ: ಸರ್ಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಗ್ರಾಮ ಸಹಾಯಕರ ಹುದ್ದೆಗೆ ‘ಜನಸೇವಕ’ ಎಂದು ಮರುನಾಮಕರಣ ಮಾಡ ಲಾಗಿದ್ದು, ಗೌರವಧನ 13 ಸಾವಿರದಿಂದ 14 ಸಾವಿರಕ್ಕೆ ಏರಿಸಲಾಗಿದೆ; ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ; ಅಸಂಘಟಿತ ಕಾರ್ವಿುಕರಿಗೆ 4 ಲಕ್ಷ ರೂ.ಗಳ ಮುಖ್ಯಮಂತ್ರಿ ವಿಮಾ ಯೋಜನೆ
1 ಲಕ್ಷ ಹುದ್ದೆ ಭರ್ತಿ: ಯುವ ಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಲು ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ.
ಹಸಿರು ಬಜೆಟ್: ಅರಣ್ಯೀಕರಣವನ್ನೇ ಮುಖ್ಯವಾಗಿಸಿಕೊಂಡು ಇದೇ ಮೊದಲ ಬಾರಿಗೆ 100 ಕೋಟಿ ರೂ. ಅನುದಾನದ ಹಸಿರು ಆಯವ್ಯಯ; ಶಿರಸಿಯಲ್ಲಿ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ.
ಪಂಚತಂತ್ರ 2.0: ಗ್ರಾಮ ಪಂಚಾಯ್ತಿಗಳ ಆಡಳಿತಕ್ಕೆ ಹೈಟೆಕ್ ಸ್ಪರ್ಶ ನೀಡಲು ಪಂಚತಂತ್ರ 2.0 ತಂತ್ರಾಂಶ ಅಳವಡಿಕೆ; ಗ್ರಾಮ ಪಂಚಾಯ್ತಿಗಳಿಗೆ ವಿಶೇಷ ಅನುದಾನ ನೀಡಲು 780 ಕೋಟಿ ರೂ.; ಜಲ ಜೀವನ್ ಮಿಷನ್ಗೆ 6.234 ಕೋಟಿ ರೂ.; ನರೇಗಾ ಯೋಜನೆಯಡಿ 88 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲು 1,800 ಕೋಟಿ ರೂ. ಮೀಸಲು; ಬಿಸಿಯೂಟ ಯೋಜನೆ ನಿರ್ವಹಣೆಗೆ ಜಿಲ್ಲಾಮಟ್ಟದಲ್ಲಿ ಆಹಾರ ಮಂದಿರ ಸ್ಥಾಪನೆ; ರಾಜ್ಯದ ರೈಲು ಜಾಲದ ಅಭಿವೃದ್ಧಿಗೆ ರಾಜ್ಯದ ಪಾಲು ನೀಡಲು 7,561 ಕೋಟಿ ರೂ.
ಬೆಂಗಳೂರಿಗೆ ಬಂಪರ್: 75 ಜಂಕ್ಷನ್ಗಳ ಅಭಿವೃದ್ಧಿಗೆ 150 ಕೋಟಿ ರೂ.- ಸೀಮ್ಲೆಸ್ ಸಿಗ್ನಲಿಂಗ್ಗೆ ಕೃತಕ ಬುದ್ಧಿಮತ್ತೆ ಬಳಕೆ; ರಸ್ತೆ ಅಭಿವೃದ್ಧಿಗೆ 1,750 ಕೋಟಿ ರೂ.; ಬೆಂಗಳೂರು ಉಪನಗರ ರೈಲು ಯೋಜನೆಗೆ 2,350 ಕೋಟಿ ರೂ.; ಮಹಿಳೆಯರಿಗಾಗಿ 250 ಸುಸಜ್ಜಿತ ‘ಶೀ ಟಾಯ್ಲೆಟ್’ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ; 9 ಕಾನೂನು ಸುವ್ಯವಸ್ಥೆ, 5 ಸಂಚಾರ ಹಾಗೂ 6 ಮಹಿಳಾ ಪೊಲೀಸ್ ಠಾಣೆಗಳ ಸ್ಥಾಪನೆ. ಹೆಚ್ಚುವರಿ 2000 ಹುದ್ದೆಗಳ ಸೃಜನೆ; ನಾಡದೇವಿ ಭುವನೇಶ್ವರಿ ದೇವಿಯ ಬೃಹತ್ ಮೂರ್ತಿ, ಥೀಮ್ ಪಾರ್ಕ್ ಸ್ಥಾಪನೆ.
ಬೆಳವಣಿಗೆ ದರ ಶೇ.7.9: ಬೆಂಗಳೂರು: ರಾಜ್ಯದ ಆರ್ಥಿಕ ಬೆಳವಣಿಗೆಯ ದರ ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.9 ರಷ್ಟು ಆಗಿದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ಕೋವಿಡ್ ನಂತರ ಆರ್ಥಿಕ ಬೆಳವಣಿಗೆಯನ್ನು ಸರ್ಕಾರ ಸಾಧಿಸುತ್ತಿದೆ ಎಂಬುದನ್ನು ಈ ಸಮೀಕ್ಷೆ ಹೇಳಿದೆ. ಸೇವಾ ವಲಯದ ಬೆಳವಣಿಗೆಯಲ್ಲಿ ಶೇ.9.2 ರಷ್ಟು ವೃದ್ಧಿಯಾಗಿದೆ. ಕಳೆದ ಸಾಲಿನಲ್ಲಿ ನಕಾರಾತ್ಮಕ ಬೆಳವಣಿಗೆ ಸಾಧಿಸಿದ್ದ ಕೈಗಾರಿಕೆ ವಲಯದ ಬೆಳವಣಿಗೆ ದರ ಶೇ.5 ಹಾಗೂ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇ.5.5 ದಾಖಲಾಗಿದೆ. ರಾಜ್ಯದಲ್ಲಿ ತಲಾವಾರು ಆದಾಯ ಸಹ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿ 2.04 ಲಕ್ಷ ರೂ.ಗಳಿದ್ದ ತಲಾ ಆದಾಯ ಈಗ 3.32 ಲಕ್ಷ ರೂ.ಗಳಿಗೆ ಹೆಚ್ಚಳವಾಗಿದೆ.