

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಪ್ರಸಕ್ತ ಸರ್ಕಾರದ ಕೊನೆಯ ಹಾಗೂ ತಮ್ಮ ಎರಡನೇ ಬಜೆಟ್ ಮಂಡನೆ ಮಾಡುತ್ತಿದ್ದು, ವಿವಿಧ ಇಲಾಖೆಗಳಿಗೆ ಬಜೆಟ್ನಲ್ಲಿ ಹಂಚಿಕೆ ಮಾಡಿರುವ ಅನುದಾನದ ವಿವರ ಈ ಕೆಳಕಂಡಂತಿದೆ.
ಇಲಾಖೆವಾರು ಅನುದಾನ ಹಂಚಿಕೆ
* ವಸತಿ ಇಲಾಖೆ- 3787.01 ಕೋಟಿ ರೂ.
* ಆಹಾರ ಮತ್ತು ನಾಗರಿಕ ಸರಬರಾಜು - 4,608 ಕೋಟಿ ರೂ.
* ಮಹಿಳಾ ಮತ್ತು ಮಕ್ಕಳ ಕಲ್ಯಾಣ- 5,676 ಕೋಟಿ ರೂ.
* ಕೃಷಿ ಮತ್ತು ತೋಟಗಾರಿಕೆ- 9,456 ಕೋಟಿ ರೂ.
* ಲೋಕೋಪಯೋಗಿ ಇಲಾಖೆ - 10,741 ಕೋಟಿ ರೂ.
* ಸಮಾಜಕಲ್ಯಾಣ ಇಲಾಖೆ - 11,163 ಕೋಟಿ ರೂ.
* ಇಂಧನ ಇಲಾಖೆ - 13,803 ಕೋಟಿ ರೂ.
* ಒಳಾಡಳಿತ ಮತ್ತು ಸಾರಿಗೆ - 14,509 ಕೋಟಿ ರೂ.
* ಆರೋಗ್ಯ ಮತ್ತು ಕುಟುಂಬ ಕಲ್ಯಾಣ 15,151 ಕೋಟಿ ರೂ.
* ಕಂದಾಯ ಇಲಾಖೆ - 15,943 ಕೋಟಿ ರೂ.
* ನಗರಾಭಿವೃದ್ಧಿ ಇಲಾಖೆ - 17,938 ಕೋಟಿ ರೂ.
* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ- 20,494 ಕೋಟಿ ರೂ.
* ಜಲಸಂಪನ್ಮೂಲ ಇಲಾಖೆ - 22,854 ಕೋಟಿ ರೂ.
* ಶಿಕ್ಷಣ ಇಲಾಖೆ - 37,960 ಕೋಟಿ ರೂ.
ಇತರೆ - 1,16,968 ಕೋಟಿ ರೂ.
ಈ ಬಾರಿಯ ಬಜೆಟ್ ಗಾತ್ರ ಒಟ್ಟು 3 ಲಕ್ಷ 9 ಸಾವಿರ 182 ಕೋಟಿ ರೂ. ಆಗಿದೆ.