ರಾಜ್ಯ ಬಂದ್​ಗೆ ಬೆಂಬಲಿಸಿ ವಿವಿಧ ಸಂಟನೆಗಳಿಂದ ಪ್ರತಿಭಟನೆ

21-RNR-05
Published on

ರಾಣೆಬೆನ್ನೂರ: ಎಂಇಎಸ್​ ಪುಂಡಾಟಿಕೆ ಖಂಡಿಸಿ ವಾಟ್ನಾಲ್​ ನಾಗರಾಜ ಅವರು ಕರ್ನಾಟಕ ಬಂದ್​ ಕರೆ ನೀಡಿದ ಹಿನ್ನೆಲೆಯಲ್ಲಿ ಮಾ. 22ರಂದು ಬಂದ್​ಗೆ ಬೆಂಬಲ ವ್ಯಕ್ತಪಡಿಸಿ ಇಲ್ಲಿಯ ವಿವಿಧ ಸಂಟನೆಗಳ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದಶಿರ್ ರವೀಂದ್ರಗೌಡ ಪಾಟೀಲ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಅಂದು ಬೆಳಗ್ಗೆ 11 ಗಂಟೆಗೆ ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿ ಬಸ್​ ನಿಲ್ದಾಣದ ವೃತ್ತಕ್ಕೆ ಬಂದು ಪ್ರತಿಭಟಿಸಲಾಗುವುದು. ನಿಲ್ದಾಣದ ಎದುರು ಮಾನವ ಸರಪಳಿ ನಿಮಿರ್ಸಿ ಕೆಲಕಾಲ ವಾಹನ ಸಂಚಾರ ತಡೆದು ಎಂಇಎಸ್​ ಪುಂಡಾಟಿಕೆ ಖಂಡಿಸಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ನಿತ್ಯಾನಂದ ಕುಂದಾಪುರ, ಕೊಟ್ರೇಶಪ್ಪ ಎಮ್ಮಿ, ನಾಗರಾಜ ಮಡಿವಾಳರ, ಮಾಂತೇಶ ಸಾರಂಗಮಠ, ಮಲ್ಲಿಕಾರ್ಜುನ ಸಾವಕ್ಕಳವರ, ಪರಮೇಶ ಅರಳಿಕಟ್ಟಿ, ಸಂಜೀವರಡ್ಡಿ ಸೋಮರಡ್ಡಿ, ಭಾಷಾಸಾಬ ಪಂಪಾಪಟ್ಟಣ, ಪ್ರಭಾಕರ ಬಸನಾಳ, ಕಿರಣ ಗುಳೇದ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net