ಸುಂಟಿಕೊಪ್ಪ: ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಕಬ್ ಮತ್ತು ಬುಲ್ ಬುಲ್ ಸೇವಾದಳದ ಇಬ್ಬರು ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಉಸ್ತವಾರಿ ಸಚಿವರಾದ ಎನ್.ಎಸ್.ಬೋಸರಾಜು ಅವರಿಂದ ರಾಜ್ಯ ಪುರಸ್ಕಾರ ನೀಡಲಾಯಿತು.
ಕಬ್ ವಿಭಾಗದಲ್ಲಿ ವಿದ್ಯಾರ್ಥಿ ಎಸ್. ಜೆನೀಶ್ ಮತ್ತು ಬುಲ್‌ಬುಲ್ ವಿದ್ಯಾರ್ಥಿನಿ ನುಹಾ ಫಾತಿಮಾ ಅವರು ರಾಜ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು. ಆ.15 ರಂದು ಮಡಿಕೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಅವರು ರಾಜ್ಯ ಪುರಸ್ಕಾರ ಪ್ರಶಸ್ತಿ ಪತ್ರ ವಿತರಿಸಿದರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಜೊವಿಟಾ ವಾಸ್ ಅವರು ಶಿಕ್ಷಕಿ ಹಾಗೂ ತರಬೇತುದಾರರಾದ ಇವಾಬೆನ್ಸಿಸ್ ಮತ್ತು ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಂಸಿಸಿ ಶುಭ ಹಾರೈಸಿದರು.
ಕಬ್ ವಿಭಾಗದಲ್ಲಿ ವಿದ್ಯಾರ್ಥಿ ಎಸ್. ಜೆನೀಶ್ ಮತ್ತು ಬುಲ್‌ಬುಲ್ ವಿದ್ಯಾರ್ಥಿನಿ ನುಹಾ ಫಾತಿಮಾ ಅವರಿಗೆ ಸಚಿವ ಎನ್.ಎಸ್.ಬೋಸರಾಜು ಅವರು ರಾಜ್ಯ ಪುರಸ್ಕಾರ ನೀಡಿ ಗೌರವಿಸಿದರು.