ಅನುದಾನಿತ ಶಾಲೆ ಖಾಲಿ ಹುದ್ದೆ ತುಂಬಲು ಕ್ರಮ; ಮಧು ಬಂಗಾರಪ್ಪ

oplus_0
oplus_0
Published on

ರಾಣೆಬೆನ್ನೂರ: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆ ಭತಿರ್ಗೆ ಶ್ರೀದಲ್ಲಿಯೆ ಕ್ರಮ ಕೈಗೊಳ್ಳಲಾಗುವುದು. ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ನಾವು ಚುನಾವಣೆಯಲ್ಲಿ ಭರವಸೆ ನೀಡಿದಂತೆ ಓಪಿಎಸ್​ (ಹಳೆ ಪಿಂಚಣಿ ಪದ್ಧತಿ) ಜಾರಿಗೊಳಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಭಾನುವಾರ ನಗರದ ಮೃತ್ಯುಂಜಯ ಸಭಾಭವನದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ, ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿ ವಿತರಣೆ ಮತ್ತು ಪ್ರತಿಭಾ ವಿದ್ಯಾಥಿರ್ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿರುವ ಖಾಲಿ ಹುದ್ದೆ ಭತಿರ್ಗೆ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ. 1996ರಿಂದ ಕನಿಷ್ಠ 5 ವರ್ಷದ ಅವಧಿಯಲ್ಲಿ ಖಾಲಿಯಾಗಿರುವ ಹುದ್ದೆಗಳಿಗೆ ತಕ್ಷಣ ತುಂಬಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿದ್ದೇನೆ. ಈ ಬಗ್ಗೆ ಶ್ರೀದಲ್ಲಿ ಆದೇಶಿಸಲಾಗುವುದು ಎಂದರು.

ಚುನಾವಣೆ ಸಮಯದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಓಪಿಎಸ್​ ಜಾರಿ ಕುರಿತು ಭರವಸೆ ನೀಡಿದ್ದೇವೆ. ಅದರಂತೆ ನಮ್ಮ ಸರ್ಕಾರದ ಅವಧಿ ಮುಗಿಯುವುದರೊಳಗೆ ಭರವಸೆ ಈಡೇರಿಸಲಾಗುವುದು. ಈ ಕುರಿತು ಸಿಎಂ ಹಾಗೂ ಆಥಿರ್ಕ ಇಲಾಖೆ ಜತೆ ಚರ್ಚೆ ನಡೆಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ನ್ಯಾಯಾಲಯದ ಆದೇಶದಂತೆ ಮತ್ತು ಆರ್​ಟಿಇ ತೀಪಿರ್ನಂತೆ ಪ್ರತಿ 30 ಮಕ್ಕಳಿಗೆ ಒಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು ಎಂಬ ನಿಯಮದ ಪ್ರಕಾರ ಶಿಕ್ಷಕರ ಮತ್ತು ಮಕ್ಕಳ ಅನುಪಾತ ಮಾಡಿ, ನಂತರ ಹೆಚ್ಚುವರಿ ಶಿಕ್ಷಕರ ನೆಪವೊಡ್ಡಿ ನೇಮಕಾತಿ ತಡೆಹಿಡಿಯಲಾಗಿದೆ ಎಂಬುದು ಶಿಕ್ಷಕರ ಆರೋಪವಾಗಿದೆ. ಈ ಬಗ್ಗೆ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗಲಿದೆ. ಆಬಳಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.

ಸರ್ಕಾರ ಕಾಲ್ಪನಿಕ ವೇತನ ನೀಡುವುದು. ಜ್ಯೋತಿ ಸಂಜೀವಿನಿ ಜಾರಿಗೊಳಿಸುವುದು ಸೇರಿ ಅನುದಾನಿತ ಶಿಕ್ಷಕರ ಬೇಡಿಕೆ ಈಡೇರಿಸಲು ಬದ್ಧವಿದೆ. ಆದರೆ, ಇದರ ಬಗ್ಗೆ ಸಮಗ್ರ ಚರ್ಚೆಯಾಗಿ ನಂತರ ಜಾರಿ ಮಾಡಲಾಗುವುದು. ಅನುದಾನಿತ ಶಾಲಾ ಮಕ್ಕಳಿಗೆ ಸರ್ಕಾರಿ ಶಾಲೆ ಮಕ್ಕಳಿಗೆ ನೀಡುವ ರೀತಿಯಲ್ಲಿ ಶೂ ಮತ್ತು ಸಾಕ್ಸ್​ ನೀಡಲಾಗುವುದು. ಶಿಕ್ಷಕರಿಗೆ ಹಬ್ಬದ ಮುಂಗಡ ಹಣ ಪಾವತಿ ಮಾಡುವ ಕುರಿತು ಚಚಿರ್ಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ತುಂಬಲು ಸರ್ಕಾರ ಈಗಾಗಲೇ ಆದೇಶ ಮಾಡಿದೆ. ಆದರೆ, ಒಳ ಮೀಸಲಾತಿ ಸಲುವಾಗಿ ಅದನ್ನು ತಡೆಹಿಡಿಯಲಾಗಿದೆ. ಆದ್ದರಿಂದ ಈ ಬಗ್ಗೆ ಶಿಕ್ಷಣ ಸಚಿವರು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಎಸ್ಸಿ, ಎಸ್ಟಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದಿಂದ ವಿವಿಧ ಯೋಜನೆಯಡಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.

ಸಂದ ರಾಜ್ಯ ಗೌರವಾಧ್ಯಕ್ಷ ಕೆ. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು.

ಸಂಘದ ಜಿಲ್ಲಾಧ್ಯಕ್ಷ ನಾಗರಾಜ ನಲವಾಗಲ, ಯುಎಸ್​ಎ ಪಾರ್ಥಸಾರಥಿ, ರಾಜ್ಯಾಧ್ಯಕ್ಷ ಎನ್​. ಗೋಪಾಲರಾವ್​, ಪ್ರಧಾನ ಕಾರ್ಯದಶಿರ್ ಎಂ.ಕೆ. ರಾಜು, ಡಿಡಿಪಿಐ ಮೋಹನ ದಂಡಿನ, ಬಿಇಒ ಶ್ಯಾಮಸುಂದರ ಅಡಿಗ, ಪ್ರಮುಖರಾದ ಆರ್​. ನಾಗರತ್ನ, ಕಲ್ಯಾಣರಾವ ಬಿರಾದಾರ್​, ವಿಜಯಕುಮಾರ ಒಪ್ಪಾರಿ, ಮಾಲತೇಶ ಎಂ., ಎಸ್​.ಎಚ್​. ಪಾಟೀಲ, ಮಾರುತಿ ಲಮಾಣಿ, ಎಂ.ಎಸ್​. ಪಾಟೀಲ, ಬಸವರಾಜ ನಾಯಕ, ಮಧು ಅಳಲಗೇರಿ, ಸುಧಾ ಕೋಟಿಹಾಳ, ಎಸ್​.ಸಿ. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net