ಗೋಣಿಕೊಪ್ಪ ದಸರಾ ಕಾರ್ಯಕ್ರಮಕ್ಕೆ ಚಾಲನೆ

05 gkp 02.
ಲಾಂಛನ ಬಿಡುಗಡೆ ಮಾಡಿದ ಪ್ರಮೋದ್ ಗಣಪತಿ
Published on

ಗೋಣಿಕೊಪ್ಪಲು: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ಸಮಿತಿಯ 47ನೇ ಜನೋತ್ಸವದ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಗೋಣಿಕೊಪ್ಪಲುವಿನ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಸಿ 11 ದಿನಗಳು ನಡೆಯುವ ದೇವಿಯ ಆರಾಧನೆಗೆ ಅರ್ಚಕರನ್ನು ಆಹ್ವಾನಿಸುವ ಮೂಲಕ ಕಾರ್ಯಕ್ರಮದ ಪ್ರಾರಂಭಕ್ಕೆ ಆಹ್ವಾನ ನೀಡಿದರು.

ಗೋಣಿಕೊಪ್ಪ ಗ್ರಾಪಂ ಸದಸ್ಯರಾದ ರಾಮಕೃಷ್ಣ ಅವರು ಅಧ್ಯಕ್ಷ ಸ್ಥಾನವನ್ನು ಸ್ವಯಂ ಪ್ರೇರಿತರಾಗಿ ಬಿಟ್ಟು ಕೊಡುವ ಮೂಲಕ ಹಲವು ದಿನಗಳಿಂದ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿದ್ದ ಗೊಂದಲದ ವಾತಾವರಣಕ್ಕೆ ತೆರೆ ಎಳೆದರು.

ಗೋಣಿಕೊಪ್ಪಲುವಿನಲ್ಲಿ ಆಯೋಜನೆಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ ಮಾತನಾಡಿ, ದೇವಿಯ ಉತ್ಸವದಲ್ಲಿ ರಾಜಕೀಯ ಮರೆತು ದೇವಿಯ ಉತ್ಸವದ ಯಶಸ್ವಿಯ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ಬೆಂಬಲದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದರೂ ಇದನ್ನು ತ್ಯಜಿಸುವ ಮೂಲಕ ಮುಂದಿನ ಕಾರ್ಯಕ್ರಮಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕರಿಸಲು ನಿರ್ಧರಿಸಿದ್ದೇನೆ.

ಗೋಣಿಕೊಪ್ಪ ಗ್ರಾಪಂ ಅಧ್ಯಕ್ಷರಾದ ಕುಲ್ಲಚಂಡ ಪ್ರಮೋದ್ ಗಣಪತಿ ಕಾವೇರಿ ದಸರಾ ಸಮಿತಿಯ ಅಧ್ಯಕ್ಷರಾಗಿ ದಸರಾವನ್ನು ಯಶಸ್ವಿಯಾಗಿ ಮುನ್ನಡೆಸಲಿ ಗ್ರಾಮ ಪಂಚಾಯಿತಿ ಸದಸ್ಯರು ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಇದರಿಂದಾಗಿ ಗೊಂದಲದ ವಾತಾವರಣ ತಿಳಿಗೊಂಡಿದ್ದು 47ನೇ ವರ್ಷದ ದಸರಾ ಜನೋತ್ಸವ ಉತ್ತಮವಾಗಿ ನಡೆಯುವ ಆಶಾಭಾವನೆ ಹೊಂದಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಕೊಣಿಯಂಡ ಬೋಜಮ್ಮ, ಮನ್ನಕ್ಕಮನೆ ಸೌಮ್ಯಾ ಬಾಲು, ಕೆ.ರಾಜೇಶ್, ನೂರೆರ ರತಿ ಅಚ್ಚಪ್ಪ, ಬಿ.ಎನ್.ಪ್ರಕಾಶ್ ಹಾಗೂ ವಿವೇಕ್ ರಾಯ್ಕರ್ ಉಪಸ್ಥಿತರಿದ್ದರು.

47ನೇ ವರ್ಷದ ಲಾಂಛನವನ್ನು ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಕಾವೇರಿ ದಸರಾ ಸಮಿತಿಯ ಉಪಾಧ್ಯಕ್ಷರಾದ ನಾಯಂದರ ಶಿವಾಜಿ, ಸಾಂಸ್ಕೃತಿಕ ಸಮಿತಿಯ ಚಂದನ್ ಕಾಮತ್, ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ರಾಮದಾಸ್,ಧ್ಯಾನ್ ಸುಬ್ಬಯ್ಯ, ಸಮಿತಿಯ ವಿವಿಧ ಪದಾಧಿಕಾರಿಗಳಾದ ರಾಜಶೇಖರ್, ನಾಮೇರ ಅಂಕಿತ್, ಕೊಕ್ಕಂಡ ರೋಷನ್, ವರಲಕ್ಷ್ಮೀ, ಧನಲಕ್ಷ್ಮೀ, ನೂರೆರ ಧನ್ಯಾ ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net