

ಬೆಂಗಳೂರು: ನೂರಾರು ವರ್ಷದಿಂದ ನಡೆದ ಶ್ರೀರಾಮ ಜನ್ಮಭೂಮಿ ಹೋರಾಟದ ನಿರ್ಣಾಯಕ ಘಟ್ಟಕ್ಕೆ ಸೋಮವಾರ ಚಾಲನೆ ದೊರೆಯಿತು.
ಜನ್ಮಭೂಮಿ ತೀರ್ಥಕ್ಷೇತ್ರ ವತಿಯಿಂದ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಅಡಿಪಾಯ ತುಂಬಿಸಲು ವೈದಿಕ ಸಂಪ್ರದಾಯದಂತೆ ಚಾಲನೆ ನೀಡಲಾಯಿತು. ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಕಾರ್ಯದರ್ಶಿಗಳಾದ ಚಂಪತ್ ರಾಯ್, ಡಾ. ಅನಿಲ್ ಮಿಶ್ರ, ಮಹಂತ ದಿನೇಂದ್ರ ದಾಸರ ಉಪಸ್ಥಿತಿಯಲ್ಲಿ ಸೋಮವಾರ ಬೆಳಗ್ಗೆ 10.55ರ ಮುಹೂರ್ತದಲ್ಲಿ ಪೂಜೆ ನೆರವೇರಿತು.
ಒಟ್ಟು 5 ಎಕರೆಯಲ್ಲಿ 2.77 ಎಕರೆ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭ ಮಾಡಲಾಗಿದೆ. ಗರ್ಭಗುಡಿ ಒಳಗೊಂಡಂತೆ ಪೂರ್ತಿ 2.77 ಎಕರೆ ಭೂಮಿಯನ್ನು 40 ಅಡಿ ಆಳದಷ್ಟು ಅಗೆಯಲಾಗಿದೆ. ಅದಕ್ಕಾಗಿ ವಾಸ್ತು ಶಾಸ್ತ್ರದ ಪ್ರಕಾರ ಮುಹೂರ್ತವನ್ನು ನಿಗದಿಪಡಿಸಿತ್ತು.