ನನ್ನ ಸಿನಿಮಾ ಹಿಟ್​ ಆದರೂ ಬೆಂಬಲ ಸಿಗುವುದಿಲ್ಲ; ಬಾಲಿವುಡ್​​ ಕರಾಳ ಸತ್ಯ ಬಿಚ್ಚಿಟ್ಟ ಸ್ಟಾರ್​ ನಟ | Star Hero

Untitled design - 2024-12-10T182312.905
Published on

ಮುಂಬೈ: ಬಾಲಿವುಡ್ ನಟ ಕಾರ್ತಿಕ್ ಆರ್ಯನ್(Star Hero) ಅವರ ಚಿತ್ರ ಭೂಲ್ ಭುಲೈಯಾ 3 ಈ ವರ್ಷದ ಬ್ಲಾಕ್ಬಸ್ಟರ್ ಸಿನಿಮಾ ಎಂಬುದು ಸಾಬೀತಾಗಿದೆ. ಈ ಚಿತ್ರವು ನಿರಂತರವಾಗಿ ಬಾಕ್ಸ್ ಆಫೀಸ್‌ನಲ್ಲಿ ಹಲವು ಚಿತ್ರಗಳ ದಾಖಲೆಗಳನ್ನು ಮುರಿದಿದೆ. ಈ ಚಿತ್ರದ ಅಗಾಧ ಯಶಸ್ಸಿನ ಹೊರತಾಗಿಯೂ ಇನ್ನೂ ಸಾಕಷ್ಟು ಹೋರಾಟವನ್ನು ಮಾಡಬೇಕಾಗಿದೆ ಎಂದು ನಟ ಕಾರ್ತಿಕ್ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಕಾರ್ತಿಕ್​ ಆರ್ಯನ್​​​ ಸ್ಟಾರ್‌ಡಮ್‌ಗೆ ದಾರಿ ಮಾಡಿಕೊಡುವಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು. ಭೂಲ್ ಭುಲೈಯಾ 3 ನಂತಹ ದೊಡ್ಡ ಹಿಟ್ ನೀಡಿದ ನಂತರವೂ ತಮ್ಮ ಮುಂದಿನ ಚಿತ್ರಗಳಿಗೆ ಚಿತ್ರರಂಗದಿಂದ ಯಾವುದೇ ಬೆಂಬಲವನ್ನು ನಿರೀಕ್ಷಿಸುವುದಿಲ್ಲ. ಮುಖ್ಯವಾಗುವುದು ಪ್ರೇಕ್ಷಕರೇ ಹೊರತು ಅವರು ಎಡವಿ ಬೀಳುವುದನ್ನು ನೋಡಲು ಕಾಯುತ್ತಿರುವ ಚಿತ್ರರಂಗದ ಜನರಲ್ಲ ಎಂದು ಹೇಳಿದರು.

ಚಿತ್ರರಂಗದಲ್ಲಿ ತಮ್ಮದೇ ಆದ ಹಾದಿಯನ್ನು ಮಾಡಿಕೊಂಡಿರುವ ಕಾರ್ತಿಕ್ "ನಾನು ಒಂಟಿ ಯೋಧ, ನೀವು ಇಂದು ನೋಡುತ್ತಿರುವ ಮನೆ, ನಾನು ಅದನ್ನು ನನ್ನ ಸ್ವಂತ ಹಣದಿಂದ ಖರೀದಿಸಿದೆ. ನಾನು ಇಲ್ಲಿಗೆ ತಲುಪಲು ಹುಚ್ಚನಂತೆ ಹೋರಾಡಿದೆ ಮತ್ತು ಅದು ಇನ್ನೂ ಮುಗಿದಿಲ್ಲ. ಈ ಬಗ್ಗೆ ನನಗೆ ಹೆಮ್ಮೆ ಇದೆ. ನಾನು ಮುಂದೆ ಯಾವುದೇ ಉದ್ಯಮದ ಬೆಂಬಲವನ್ನು ಪಡೆಯುವುದಿಲ್ಲ ಮತ್ತು ಭೂಲ್ ಭುಲೈಯಾ 3ನಲ್ಲಿ ದೊಡ್ಡ ಹಿಟ್ ನೀಡಿದರೂ ನನ್ನ ಮುಂದಿನ ಚಿತ್ರಕ್ಕಾಗಿ ಯಾರೂ ನನ್ನ ಹಿಂದೆ ಬರುವುದಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ.

ಎಲ್ಲರೂ ಅದನ್ನು ಅನುಭವಿಸಬಹುದು ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಯಾಣದಲ್ಲಿ ನಾನು ಕೆಲವು ಅದ್ಭುತ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ. ಆದರೆ ಇದು ದೊಡ್ಡ ವರ್ಗವಾಗಿದೆ ಮತ್ತು ಅವರ ಹೃದಯವನ್ನು ನಾನು ಎಂದಿಗೂ ಗೆಲ್ಲಲು ಸಾಧ್ಯವಿಲ್ಲ. ನನಗೆ ಯಾವುದೇ ಆಸೆ ಇಲ್ಲ ನನ್ನ ಪ್ರೇಕ್ಷಕರನ್ನು ಗೆಲ್ಲಲು ನಾನು ಬಯಸುತ್ತೇನೆ ಅಷ್ಟೆ ಎಂದು ತಿಳಿಸಿದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net