

ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್ ಸೋಂಕು ಹರಡುವಿಕೆ 2ನೇ ಹಂತದಲ್ಲಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾ ನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.
ರಾಷ್ಟ್ರದಲ್ಲಿ 3ನೇ ಹಂತದ ಕರೊನಾ ವೈರಸ್ ಸೋಂಕು ಹರಡಿದರೆ ಅಪಾಯ. ಹೀಗಾಗಿ ನಾವು ಎಚ್ಚರಿಕೆ ವಹಿಸಬೇಕು. ಅಂತಾರಾಷ್ಟ್ರೀಯ ಗಡಿಗಳನ್ನು ಮುಚ್ಚುವುದರ ಮೂಲಕ 3ನೇ ಹಂತದ ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಬೇಕು ಎಂದರು.
ಕರೊನಾ ವೈರಸ್ ಸೋಂಕು ಹರಡುವಿಕೆಯನ್ನು 4 ಹಂತಗಳಲ್ಲಿ ಗುರುತಿಸುತ್ತೇವೆ. ಮೊದಲನೆ ಹಂತಲ್ಲಿ ಸೋಂಕು ಹೊಂದಿದ ವಿದೇಶಿಯರೊಂದಿಗೆ ಸಂಪರ್ಕ. 2ನೇ ಹಂತ ವಿದೇಶಿಯರಿಂದ ಇಬ್ಬರು ಹಾಗೂ ಮೂವರಿಗೆ ಸೋಂಕು ಹರಡುವುದು. 3ನೇ ಹಂತ ಭಾರತೀಯರಿಂದಲೇ ಸೋಂಕು ಹರಡುವುದು. 4ನೇ ಹಂತ ಅಪಾಯಕಾರಿಯಾಗಿದೆ. ಈ ಹಂತ ಚೀನಾದಲ್ಲಿ ಸಂಭವಿಸಿದೆ ಎಂದು ಅವರು ಹೇಳಿದರು.
ಭಾರತದಲ್ಲಿ 3ನೇ ಹಂತಕ್ಕೆ ಸೋಂಕು ಹರಡುವುದನ್ನು ಬಿಡಬಾರದು. ಬಿಟ್ಟರೆ ಅಪಾಯ ಹೀಗಾಗಿ 2ನೇ ಹಂತದಲ್ಲಿ ಸೋಂಕು ನಿವಾರಣೆ ಮಾಡಲು ಸರ್ಕಾರ ಕೆಲವು ಕ್ರಮಗಳನ್ನು ಜರುಗಿಸಬೇಕು. ಸರ್ಕಾರದೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದರು.
ರಾಷ್ಟ್ರದಲ್ಲಿ ಫೆಬ್ರವರಿ 2 ರಂದು ಸೋಂಕು ಹರಡಿದ 3 ಪ್ರಕರಣಗಳು ಇದ್ದವು. ಮಾರ್ಚ್ 17ರಂದು ಈ ಸಂಖ್ಯೆ 137ಕ್ಕೆ ತಲುಪಿದೆ. ರಾಷ್ಟ್ರದ 13 ರಾಜ್ಯಗಳಿಗೆ ಸೋಂಕು ಹರಡಿದೆ. (ಏಜೆನ್ಸೀಸ್)