ಗಂಜಾಂನಿಂದ ಶ್ರೀರಂಗಪಟ್ಟಣದವರೆಗೂ ಸಹಸ್ರಾರು ಪೊಲೀಸರನ್ನು ನಿಯೋಜಿಸಲಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಚಾಮರಾಜನಗರ ಎಸ್ಪಿ ಬಿ.ಟಿ.ಕವಿತಾ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗಂಗಾಧರಸ್ವಾಮಿ ಹಾಗೂ ತಿಮ್ಮಯ್ಯ ನಿರ್ದೇಶನದಲ್ಲಿ ಸೇರಿದಂತೆ ನಾಲ್ವರು ಅಪರ ವರಿಷ್ಠಾಧಿಕಾರಿಗಳು, 9 ಜನ ಡಿವೈಎಸ್ಪಿ, 35 ಪೊಲೀಸ್ ಇನ್‌ಸ್ಪೆಕ್ಟರ್, 60 ಪಿಎಸ್‌ಐ, 123 ಎಎಸ್‌ಐ, ಸಂಚಾರಿ, 10 ಕೆಎಸ್‌ಆರ್‌ಪಿ ತುಕಡಿ, ಶಸ್ತ್ರಸಜ್ಜಿತ ಸಹಿತ 2(ಕ್ಯೂಆರ್‌ಟಿ) ಕ್ಷಿಪ್ರಕಾರ್ಯಪಡೆ ವಾಹನಗಳೊಂದಿಗೆ, 200 ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ.