ಉತ್ತಮ ಆರೋಗ್ಯಕ್ಕೆ ಶ್ರೀರಾಮುಲು ಟಿಪ್ಸ್

page 7 4
Published on

ಬೆಂಗಳೂರು: ಕರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದ ನೀತಿ-ನಿಯಮಗಳನ್ನು ಜನರು ಕಟ್ಟುನಿಟ್ಟಾಗಿ ಸಮಪರ್ಕವಾಗಿ ಪಾಲಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಿಯಾದರೂ ಪಾಲಿಸುವಂತೆ ಮಾಡಬೇಕಾಗುತ್ತದೆ ಎಂದು ಶ್ರೀರಾಮುಲು ಎಚ್ಚರಿಸಿದ್ದಾರೆ. ಇದೇ ವೇಳೆ ಆರೋಗ್ಯ ಕಾಪಾಡಿಕೊಳ್ಳಲು ಕೆಲ ಸಲಹೆಗಳನ್ನೂ ನೀಡಿದ್ದಾರೆ.

ಸಲಹೆಗಳು: -* ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. * ಮನೆಯ ಹೊರಗೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. * ಕೈಗಳ ಸ್ವಚ್ಛತೆಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು. * ಯೋಗಾಭ್ಯಾಸ ರೂಢಿಸಿಕೊಳ್ಳಬೇಕು. * ಗಿಡಮೂಲಿಕೆಯಿಂದ ಮಾಡಿದ ಚಹಾ ಸೇವಿಸಬೇಕು. * ಆಹಾರದಲ್ಲಿ ಮೆಣಸು, ಶುಂಠಿ, ಬೆಳ್ಳುಳ್ಳಿ ಬಳಕೆ ಮಾಡಿ. * ಹಾಲಿನಲ್ಲಿ ಅರಿಶಿಣ ಸೇರಿಸಿ ಸೇವಿಸಿ. * ಪ್ರತಿನಿತ್ಯ ಚವನಪ್ರಾಶ್ ಲೇಹ್ಯ ಸೇವಿಸಿ. * ಮೂಗಿನ ಆರೋಗ್ಯಕ್ಕೆ ಅರ್ಕೆಅಜಿಬ್ ಮಿಶ್ರಣ ಬಳಸಿ. * ವೈದ್ಯರ ಸಲಹೆ ಪಡೆದು ಆರ್ಸೆನಿಕಂ ಆಲ್ಬಂ-30 ಮಾತ್ರೆ 3 ದಿನ ಸೇವಿಸಿ.

ಕರೊನಾ ತಡೆಗೆ ತಜ್ಞರ ತಂಡ: ಕರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೋವಿಡ್ -19 ತಜ್ಞರ ತಂಡ ರಚಿಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಜಾಗತಿಕ ಆರೋಗ್ಯ ಸಲಹೆಗಾರ ಡಾ. ಸ್ವರೂಪ್ ಸರ್ಕಾರ್, ಜಿನಿವಾ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್, ವಿಶ್ವ ಆರೋಗ್ಯ ಸಂಸ್ಥೆ ಸಲಹೆಗಾರ ಡಾ. ವಿಶಾಲ್ ರಾವ್ ನೇತೃತ್ವದಲ್ಲಿ ತಜ್ಞರ ತಂಡ ರಚನೆ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net