ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭ

IMG-20240529-WA0196
Published on
  • ಶ್ರೀರಾಮ ಸೇನೆ ಕರ್ನಾಟಕದಿಂದ ಚಾಲನೆ
    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಯುವಕರು ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ಪ್ರೀತಿಸುವ ನಾಟಕವಾಡಿ ಮದುವೆಗೂ ಮುನ್ನ ಮುಸ್ಲಿಂ ಸಮುದಾಯಕ್ಕೆ ಮತಾಂತರ ಮಾಡುತ್ತಿದ್ದು, ಅವರ ರಕ್ಷಣೆಗಾಗಿ ಶ್ರೀರಾಮ ಸೇನೆ ಕರ್ನಾಟಕ 24/7 ಸಹಾಯವಾಣಿ 9090443444 ತೆರೆದಿದೆ.
    ಪ್ರತಿನಿತ್ಯ ಮುಸ್ಲಿಂ ಸಮುದಾಯದವರು ರಾಜ್ಯದ ಅನೇಕ ಕಡೆ ಸನಾತನ ಹಿಂದೂ ಧರ್ಮದ ಸಹೋದರಿಯರ ಮೇಲೆ ಲವ್ ಜಿಹಾದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶಾಲಾ-ಕಾಲೇಜುಗಳ ಮುಂದೆ ಬಂದು ನಿಲ್ಲುವುದು. ಹೆಣ್ಣು ಮಕ್ಕಳ ಬಳಿ ವಿನಯವಾಗಿ ಮಾತನಾಡುವುದು. ಸಣ್ಣ ಪುಟ್ಟ ಉಡುಗೊರೆಗಳನ್ನು ನೀಡುವುದು. ಬೈಕ್‌ಗಳನ್ನು ತಂದು ವ್ಹೀಲಿಂಗ್ ಹೀಗೆ ಅನೇಕ ಮಾದರಿಗಳಲ್ಲಿ ಹೆಣ್ಣು ಮಕ್ಕಳನ್ನು ಮೋಸದ ಲವ್ ಜಿಹಾದಿಗೆ ಸಿಲುಕಿಸಿ ಇಡೀ ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ ಎಂದು ಶ್ರೀರಾಮ ಸೇನೆ ಕರ್ನಾಟಕ ಅಧ್ಯಕ್ಷ ಎಸ್.ಭಾಸ್ಕರನ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
    ಲವ್ ಜಿಹಾದಿಗೆ ಸಿಲುಕಿಸಿದ ಹೆಣ್ಣು ಮಕ್ಕಳನ್ನು ಕಾಲ ಕ್ರಮೇಣ ಭಯೋತ್ಪಾದನೆಗೆ ಬಳಸಿಕೊಳ್ಳುವುದು, ಮಾದಕ ವ್ಯಸನಿಗಳಾಗಿಸುವುದು, ಮಕ್ಕಳನ್ನು ಹೆರುವ ಯಂತ್ರಗಳನ್ನಾಗಿಸುತ್ತಿದ್ದಾರೆ. ಅಲ್ಲದೆ, ಇಸ್ಲಾಂ ಮತ ಸ್ವೀಕರಿಸಿ ಬುರ್ಖಾ ಧರಿಸಲು ನಿರಾಕರಿಸಿದರೆ ಗೋಮಾಂಸ, ಅನೈತಿಕ ಮತ್ತು ಅನೈಸರ್ಗಿಕ ಕಾಮ, ಅಶ್ಲೀಲ ವಿಡಿಯೋ ,ಪೊಟೋ ಮೂಲಕ ಬೆದರಿಸಿ ಅತ್ಯಾಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಮುಸ್ಲಿಂ ಸಮುದಾಯದ ಯುವಕರ ಲವ್ ಜಿಹಾದ್‌ಗೆ ಬಲಿಯಾದ ಅದೆಷ್ಟೋ ಹಿಂದೂ ಧರ್ಮದ ಹೆಣ್ಣು ಮಕ್ಕಳು ಜೀವ ಕಳೆದುಕೊಂಡಿರುವ ನಿದರ್ಶನಗಳಿವೆ. ಉತ್ತರ ಭಾರತದಲ್ಲಿ 2022-23ರಲ್ಲಿ ಒಟ್ಟು 153 ಯುವತಿಯರು ಬರ್ಬರವಾಗಿ ಕೊಲೆಯಾಗಿದ್ದಾರೆ. ಉತ್ತರ ಪ್ರದೇಶ 69, ಮಧ್ಯ ಪ್ರದೇಶ 22, ಗುಜರಾತ್ 12, ಉತ್ತರಾಖಂಡ 11, ಮಹಾರಾಷ್ಟ್ರ 9, ಇದರಲ್ಲಿ ಅಪ್ರಾಪ್ತ ಹಿಂದೂ ಬಾಲಕಿಯರು ಶೇ.27.5 ಮತ್ತು ಶೇ. 72.5 ದಲಿತ ಯುವತಿಯರು, ಶೇ.15 ರಷ್ಟು ಇತರ ಜಾತಿಗಳವರಿದ್ದಾರೆ. ಇದನ್ನು ತಡೆಯುವ ಮೂಲ ಉದ್ದೇಶದಿಂದ ಶ್ರೀರಾಮ ಸೇನೆ ಸಹಾಯವಾಣಿ ತೆರೆದಿದೆ ಎಂದು ಹೇಳಿದರು.
    ಸೇನೆಯ ವಿಭಾಗ ಅಧ್ಯಕ್ಷ ವೈ.ಡಿ.ಅಮರ್‌ನಾಥ್, ಪ್ರಧಾನ ಕಾರ್ಯದರ್ಶಿ ಸುಂದರೇಶ್ ನರ್ಗ್‌ಲ್ ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net