ಭಾರತೀಯ ಸಂಪ್ರದಾಯವನ್ನು ಗೌರವಿಸಿ

19sri-1 vishwakarma
ಶೃಂಗೇರಿ ತಾಲೂಕು ರಾಜನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಋಗ್‌ಉಪಾಕರ್ಮವು ತಾಲೂಕು ವಿಶ್ವಕರ್ಮ ಸೇವಾ ಸಮಿತಿಯಿಂದ ಸಾಮೂಹಿಕವಾಗಿ ನೆರವೇರಿತು. ರಾಘವೇಂದ್ರ ಆಚಾರ್ಯ, ವೆಂಕಟೇಶ್ ಆಚಾರ್ಯ, ಸಂತೋಷ್ ಆಚಾರ್ಯ ಇದ್ದರು.
Published on

ಶೃಂಗೇರಿ: ತಾಲೂಕಿನ ರಾಜನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಋಗ್‌ಉಪಾಕರ್ಮ ಸೋಮವಾರ ತಾಲೂಕು ವಿಶ್ವಕರ್ಮ ಸೇವಾ ಸಮಿತಿಯಿಂದ ಸಾಮೂಹಿಕವಾಗಿ ನೆರವೇರಿತು.
ಜನಿವಾರ ಧಾರಣೆಯ ಧಾರ್ಮಿಕ ಆಚರಣೆ ನೆರವೇರಿಸಿ ಪುರೋಹಿತ ಶ್ರೀ ವೇಲಾಪುರಿ ವಿಶ್ವನಾಥ ಶರ್ಮ ಮಾತನಾಡಿ, ನಾವು ಯಾವುದೇ ಶುಭ ಕಾರ್ಯ ಮಾಡುವ ಮೊದಲು ಭಗವಂತನ ಆರಾಧನೆಯಾಗಿ ಹವನ, ಪೂಜೆಗಳನ್ನು ಮಾಡುತ್ತೇವೆ. ನಮಗೆ ಉತ್ತಮ ಸಂಸ್ಕಾರ ಸಿಗಬೇಕಾದರೆ ನಾವು ಭಾರತೀಯ ಸಂಪ್ರದಾಯಗಳನ್ನು ಗೌರವಿಸಬೇಕು. ರೂಢಿಗತವಾಗಿ ಬಂದಿರುವ ಜನಿವಾರ ಧಾರಣೆ ಮಾಡುವುದು ಅತ್ಯುನ್ನತವಾದ ಮೌಲ್ಯ. ಪ್ರತಿಯೊಬ್ಬ ವ್ಯಕ್ತಿಗೂ ಆಂತರಿಕ ಹಾಗೂ ಬಾಹ್ಯ ಸೌಂದರ‌್ಯವಿರುತ್ತದೆ. ಅಲೌಕಿಕ ಸಾಧನೆಗೆ ಹಲವಾರು ನಿಯಮಗಳು ಇರುತ್ತವೆ. ಮಾನವನಿಗೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸ ಎಂಬ ನಾಲ್ಕು ಆಶ್ರಮಗಳಿದ್ದು ಉಪನಯನ ಎಂಬುದು ಮೂಲಸಂಸ್ಕಾರ. ಜ್ಞಾನದ ಜತೆ ಸಂಸ್ಕಾರ ಪಡೆಯಲು ಪ್ರತಿನಿತ್ಯ ಸಂಧ್ಯಾವಂದನೆ ಮಾಡುವುದು ಅವಶ್ಯಕ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net