

ಬೆಂಗಳೂರು: ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸಿರುವುದು ಬಹಳ ದುರ್ದೈವದ ಸಂಗತಿಯಾಗಿದೆ. ಇದು ಪ್ರತಿಯೊಬ್ಬ ಹಿಂದೂವಿನ ಹೃದಯವನ್ನು ಆಳವಾಗಿ ಘಾಸಿಗೊಳಿಸಿದೆ ಎಂದು ಆರ್ಟ್ ಆಫ್ ಲಿವಿಂಗ್‌ನ ಶ್ರೀರವಿಶಂಕರ್ ಗುರೂಜಿ ಹೇಳಿದ್ದಾರೆ.
ಪವಿತ್ರವಾದ ದೇವಸ್ಥಾನಗಳ ಆಡಳಿತವನ್ನು ಭಕ್ತರಿಗೆ ಒಪ್ಪಿಸುವ ಕಾಲ ಬಂದಿದೆ. ಕಣ್ಣಲ್ಲಿ ರಕ್ತವಿಲ್ಲದ ಉದ್ಯಮಿಗಳು ಮತ್ತು ರಾಜಕಾರಣಿಗಳು ಭಾರತದ ಪರಂಪರೆಯ ದೇವಾಲಯಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದರು
ದುರಾಸೆಯ ಫಲಿತಾಂಶವು ಕಲಬೆರಕೆಯ ಹಿಂದೆ ಇದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಲಡ್ಡುಗಳನ್ನು ಮಾತ್ರವಲ್ಲದೆ ದೇವಸ್ಥಾನಗಳಲ್ಲಿ ವಿತರಿಸುವ ಆಹಾರ ಪದಾರ್ಥಗಳನ್ನೂ ತಪಾಸಣೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಶಿರೋಮಣಿ ಗುರುದ್ವಾರ ಪರ್ಬಂಧತ್ ಸಮಿತಿ, ಮುಸ್ಲಿಂ ಸಂಸ್ಥೆಗಳು, ಕ್ರಿಶ್ಚಿಯನ್ ಸಂಸ್ಥೆಗಳಲ್ಲಿಯೂ ಇದೇ ರೀತಿಯ ಬೋರ್ಡ್‌ಗಳನ್ನು ಹೊಂದಿರಬೇಕು. ಆಧ್ಯಾತ್ಮಿಕ ನಾಯಕರ ಮಂಡಳಿಯ ಅಗತ್ಯವಿದೆ. ಸರ್ಕಾರದ ಪ್ರತಿನಿಧಿಗಳು ಇರಬೇಕು. ಅವರೂ ಸಮಿತಿಯಲ್ಲಿ ಭಾಗವಹಿಸಿ ದೇವಸ್ಥಾನದ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಶ್ರೀ ರವಿಶಂಕರ್ ಗುರೂಜಿ ಹೇಳಿದರು.