ಬ್ಯಾಟರಾಯನಪುರದಲ್ಲಿ ಶ್ರೀರಾಮೋತ್ಸವ

rama
Published on

ಬೆಂಗಳೂರು : ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಪನೆಯಾಗುತ್ತಿರುವುದರ ಹಿನ್ನೆಲೆಯಲ್ಲಿ ಎಲ್ಲೆಡೆ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಶ್ರೀರಾಮೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.

ಬ್ಯಾಟರಾಯನಪುರದ ಸ್ವಾಮಿ ವಿವೇಕಾನಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವು ಸೋಮವಾರ (ಜ.22) ಸಂಜೆ 4 ಗಂಟೆಯಿಂದ ಆರಂಭವಾಗಲಿದ್ದು, ಗಾಯಕ ಶಶಿಧರ ಕೋಟೆಯವರು ಶ್ರೀರಾಮನ ಭಕ್ತಿಗೀತೆಗಳ ಭಜನೆ ನಡೆಸಿಕೊಡಲಿದ್ದಾರೆ. ಹಾಗೂ ವಿವಿಧ ಕಲಾವಿದರಿಂದ ಗಾಯನ, ಭರತನಾಟ್ಯ, ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ವಿಶೇಷ ಆಕರ್ಷಣೆಯಾಗಿ ತಿಂಡಿ ಮೇಳವನ್ನು ಆಯೋಜಿಸಲಾಗಿದ್ದು, ದೋಸೆ ಹಬ್ಬ, ಕಡಲೆಕಾಯಿ ಪರಿಷೆ, ಅವರೆಕಾಯಿ ಪರಿಷೆ ನಡೆಯಲಿದೆ. ಅಂತಿಮವಾಗಿ ಸಂಜೆ ದೀಪೋತ್ಸವ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀರಾಮನ ಕೃಪೆಗೆ ಪಾತ್ರರಾಗಬೇಕೆಂದು ಕೇಸರಿ ೌಂಡೇಶನ್ ಸಂಸ್ಥಾಪಕ ಎಚ್.ಸಿ.ತಮ್ಮೇಶಗೌಡ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net