ನೇಹಾ ಹತ್ಯೆಗೆ ರಂಭಾಪುರಿ, ಶ್ರೀಶೈಲ, ಕಾಶೀ ಜಗದ್ಗುರುಗಳ ಖಂಡನೆ

New Project
Published on

ಹುಬ್ಬಳ್ಳಿ: ಕಾಲೇಜು ಆವರಣದಲ್ಲಿ ನಡೆದ ನೇಹಾ ಹಿರೇಮಠ ಅವರ ಕೊಲೆಯನ್ನು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಮತ್ತು ಶ್ರೀಶೈಲ ಪೀಠದ ಡಾ. ಚನ್ನಸಿದ್ಧರಾಮ ಜಗದ್ಗುರುಗಳು, ಕಾಶೀ ಪೀಠದ ಡಾ.ಚಂದ್ರಶೇಖರ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ.

ವಿಜಯವಾಣಿಯೊಂದಿಗೆ ಮಾತನಾಡಿದ ಪಂಚಪೀಠದ ಜಗದ್ಗುರುತ್ರಯರು, ಮಕ್ಕಳ ಭವಿಷ್ಯವನ್ನು ಸೃಷ್ಟಿಸುವ ಜ್ಞಾನದೇಗುಲದ ಆವರಣದಲ್ಲಿ ಇಂತಹ ಘೋರಕೃತ್ಯ ನಡೆದಿರುವುದು ನಾಗರೀಕ ಸಮಾಜ ತಲೆತಗ್ಗಿಸುವಂತಹ ವಿಚಾರ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಆರೋಪಿಗೆ ಶೀಘ್ರವೇ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇಂತಹ ಪ್ರಕರಣಗಳಿಂದ ಹೆಣ್ಣುಮಕ್ಕಳನ್ನು ಶಾಲೆ-ಕಾಲೇಜಿಗೆ ಕಳುಹಿಸಲು ಪೋಷಕರು ಹಿಂದೆ ಸರಿಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಿಂದು ಹೆಣ್ಣುಮಕ್ಕಳನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ದಿಕ್ಕು ತಪ್ಪಿಸುವುದು, ಅದಕ್ಕೆ ಸಹಕರಿಸದಿದ್ದರೆ ಹತ್ಯೆಯನ್ನೇ ಮಾಡುವ ದುಸ್ಥಿತಿಗೆ ಇಳಿದಿರುವುದು ಸಮಾಜದ ದುರ್ದೈವ. ಹಿಂದು ಸಮಾಜ ಇನ್ನಾದರೂ ಜಾಗೃತರಾಗಿ ಇಂತಹ ದುಷ್ಕೃತ್ಯ ನಡೆದಾಗ ಜಾತಿ, ಮತ,ಪಂಥ ಎನ್ನದೆ ಒಕ್ಕೊರಲಿನಿಂದ ಖಂಡಿಸಬೇಕು. ಆರೋಪಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ನೇಹಾಗೆ ನ್ಯಾಯ ಕೊಡಿಸದಂತಾಗುತ್ತದೆ ಎಂದು ಜಗದ್ಗುರುತ್ರಯರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net