

ರಾಣೆಬೆನ್ನೂರ: ಜಿಲ್ಲಾ ನೇಕಾರ ಸಮುದಾಯಗಳ ಓಕ್ಕೂಟ ವತಿಯಿಂದ ಇಲ್ಲಿಯ ಮಾರುತಿ ನಗರದ ಶ್ರೀರಾಮ ಮಂದಿರದಲ್ಲಿ ರಾಷ್ಟ್ರೀಯ ಕೈಮಗ್ಗ ದಿನ ಆಚರಿಸಲಾಯಿತು.
ಸಮಾರಂಭ ಉದ್ಘಾಟಿಸಿದ ಓಕ್ಕೂಟದ ಗೌರವ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಮಾತನಾಡಿ, ಸರ್ಕಾರ ನೇಕಾರರ ಕೈಮಗ್ಗಗಳಿಗೆ ವಿವಿಧ ಯೋಜನೆ ಒದಗಿಸಿಕೊಡುವ ಮೂಲಕ ನೇಕಾರರ ನೆರವಿಗೆ ಬರಬೇಕು ಎಂದರು.
ಓಕ್ಕೂಟದ ಅಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಹಿರಿಯ ನೇಕಾರರನ್ನು ಸನ್ಮಾನಿಸಲಾಯಿತು.
ಪ್ರಮುಖರಾದ ಪ್ರವಿಣ ಕೋರ್ಪಡೆ, ಪಾಂಡು ಪೂಜಾರ, ಬಸವರಾಜ ಲೆ$್ಮಶ್ವರ, ರಮೇಶ ಹುತ್ತಲ, ಇಂದಿರಮ್ಮ ಪೂಜಾರ, ದ್ಯಾಮಣ್ಣ ಸುಂಕಾಪುರ, ಗಣೇಶ ಶಿರಗೂರು, ತಿಪ್ಪೇಶ ಅಗಡಿ, ಸೋಮು ಸಾಳೇರ, ಪ್ರೀತಂ ಬಜ್ಜಿ, ಶ್ರೀನಿವಾಸ ಅಡ್ಮನಿ, ಅಣ್ಣಪ್ಪ ಹಳ್ಳಳ್ಳಿ ಮತ್ತಿತರರು ಉಪಸ್ಥಿತರಿದ್ದರು.