

ತೀರ್ಥಹಳ್ಳಿ: ತಾಲೂಕಿನ ಹುಂಚದಕಟ್ಟೆ ಗ್ರಾಮ ಸಮೀಪದ ಶ್ರೀ ರಾಮನಸರ ಶ್ರೀ ನಾಗದೇವತೆ, ಚೌಡೇಶ್ವರಿ ದೇವಸ್ಥಾನದಲ್ಲಿ 19ನೇ ವರ್ಷದ ವರ್ಧಂತಿ ವಿಜೃಂಭಣೆಯಿಂದ ಜರುಗಿತು. ಮಹೋತ್ಸವದ ಅಂಗವಾಗಿ ಕಲಾಹೋಮ, 108 ಕಲಶಾಭಿಷೇಕ, ಹೋಮ ಹವನಗಳ ಪೂರ್ಣಾಹುತಿ, ಮಹಾಮಂಗಳಾರತಿ, ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ 7ಕ್ಕೆ ಆಶ್ಲೇಷ ಬಲಿ ಮತ್ತು ರಂಗ ಪೂಜೆ ಜರುಗಿತು. ಶ್ರೀ ನಾಗದೇವತೆಗೆ ಹೂವಿನ ಅಲಂಕಾರ ಮಾಡಲಾಗಿತ್ತು.
ಹೊನ್ನಾವರ ತಾಲೂಕು ನಗರ ಬಸ್ತಿಕೇರಿಯ ಗೇರುಸೊಪ್ಪ ಸೀಮೆಯ ಶ್ರೀ ಆಂಜನೇಯ ಸ್ವಾಮಿ ದೇವರ ಅಡ್ಡಪಲ್ಲಕ್ಕಿ ಉತ್ಸವ ಜರುಗಿತು. ಹಿರಿಯಡ್ಕ ಮೇಳದವರಿಂದ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಧಾರ್ಮಿಕ ವಿಧಿ ವಿಧಾನಗಳನ್ನು ವಿದ್ವಾನ್ ಮುರಳೀಧರ ಕೆದ್ಲಾಯ್ ಹೆಗ್ಡೆಕೆರೆ ಹಾಗೂ ದೇವಸ್ಥಾನ ಪ್ರಧಾನ ಅರ್ಚಕ ಸುರೇಶ್ ಭಟ್, ಶಂಕರ್ ಭಟ್, ರಮೇಶ್ ಭಟ್ ನೆರವೇರಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ಸುನಂದಮ್ಮ, ಚಂದ್ರಶೇಖರ್, ಹಾಗೂ ನಾಗರಾಜ್ ಇತರರಿದ್ದರು.