21ರಿಂದ ಶ್ರೀ ಮಾರಿಕಾಂಬಾ ಜಾತ್ರೋತ್ಸವ

maari jatre
ಶಿಕಾರಿಪುರದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆಯ ಕರಪತ್ರ ಬಿಡುಗಡೆ ಮಾಡಲಾಯಿತು. ಗೋಣಿ ಪ್ರಕಾಶ್, ಹುಲ್ಮಾರ್ ಮಹೇಶ್, ಶಿವಶಂಕರಪ್ಪ ಇತರರಿದ್ದರು.
Published on

ಶಿಕಾರಿಪುರ: ಪಟ್ಟಣದಲ್ಲಿ ಶ್ರೀ ಮಾರಿಕಾಂಬಾ ಜಾತ್ರೋತ್ಸವ ಜ.21ರಿಂದ 25ರವರೆಗೆ ಜರುಗಲಿದೆ ಎಂದು ಜಾತ್ರಾ ಸಮಿತಿ ಅಧ್ಯಕ್ಷ ಗೋಣಿ ಪ್ರಕಾಶ್ ಹೇಳಿದರು.

21ರಂದು ಬೆಳಗ್ಗೆ ದೇವಿ ಪ್ರತಿಷ್ಠಾಪನೆ, ಉಡಿ ತುಂಬುವ ಕಾರ್ಯಕ್ರಮ, ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಲಾಮೇಳ, ಡಿಜೆಯೊಂದಿಗೆ ಅದ್ದೂರಿ ಮೆರವಣಿಗೆ ನಡೆಯಲಿದೆ. ಉತ್ಸವ ಸಾಗುವ ಮಾರ್ಗದಲ್ಲಿ ವಿದ್ಯುತ್ ದೀಪಾಲಂಕಾರ, ಪ್ರಮುಖ ಮಾರ್ಗದಲ್ಲಿನ ಎಲ್ಲ ದೇವಸ್ಥಾನಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಬಾರಿ ಜನರನ್ನು ಆಕರ್ಷಿಸಲು ಮೂರು ದಿನಗಳ ಹೆಲಿ ಟೂರಿಸಂ ಒದಗಿಸಲಾಗುತ್ತಿದೆ. ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹಲವು ಆಟದ ಸೌಲಭ್ಯ ಕಲ್ಪಿಸಲಾಗಿದೆ. ಹುಚ್ಚುರಾಯ ಸ್ವಾಮಿ ಕೆರೆಯಲ್ಲಿ ದೋಣಿ ವಿಹಾರ ಸೌಲಭ್ಯ ಇದೆ. 23ರಿಂದ 25ರವರೆಗೆ ಶಿವಗಿರಿ ಮರಾಠ ಮಂದಿರ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಜಂಗೀಕುಸ್ತಿ ನಡೆಯಲಿದೆ ಎಂದು ಹೇಳಿದರು.

ಜಾತ್ರೆ ಸಮಿತಿ ಮಾಜಿ ಅಧ್ಯಕ್ಷ ಹುಲ್ಮಾರ್ ಮಹೇಶ್ ಮಾತನಾಡಿ, ಜಾತ್ರೆ ಯಶಸ್ವಿಗಾಗಿ ಅಲ್ಪಸಂಖ್ಯಾತ ಸಮುದಾಯದವರೂ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವುದು ಸೌಹಾರ್ದದ ಸಂಕೇತ. ನೌಕರರು, ವರ್ತಕರು, ರೈತರು, ಎಲ್ಲ ಸಮುದಾಯದವರೂ ದೇಣಿಗೆ ನೀಡಿದ್ದಾರೆ. ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ದೇವಸ್ಥಾನ ಸಮಿತಿಯ ಶಿವಶಂಕರಪ್ಪ, ಗೂಳೆಪ್ಪ, ಚಿಕ್ಕಣ್ಣ, ಶಿವನ ಗೌಡ, ಕೆ.ಹಾಲಪ್ಪ, ರಾಜಪ್ಪ, ಪ್ರಶಾಂತ್, ಅಶೋಕ್, ಶ್ರೀಕಾಂತ್, ಗಿರೀಶ್, ಪ್ರವೀಣ್, ಕುಮಾರ್, ಆನಂದ, ಗೋಣಿ ಸಂದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net