

ಎನ್.ಆರ್.ಪುರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ವಾರ್ಷಿಕೋತ್ಸವದ ಅಂಗವಾಗಿ ಶೆಟ್ಟಿಕೊಪ್ಪ ಮುಖ್ಯರಸ್ತೆಯಲ್ಲಿ ಪಾಳು ಬಿದ್ದಿದ್ದ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿದರು.
ತುಂಬಾ ದಿನಗಳಿಂದ ಹಾಳು ಬಿದ್ದಿದ್ದು ಮಳೆಗಾಲದಲ್ಲಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ಅದನ್ನು ಗಮನಿಸಿದ ಶೆಟ್ಟಿಕೊಪ್ಪ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಬಸ್ ನಿಲ್ದಾಣ ಸ್ವಚ್ಛಗೊಳಿಸಿದರು. ಗ್ರಾಪಂನ ಸಹಯೋಗದೊಂದಿಗೆ ಬಸ್ ನಿಲ್ದಾಣ ಮತ್ತು ರಸ್ತೆಯ ಮಧ್ಯದ ಕಾಲುವೆಗೆ ಸಿಮೆಂಟ್ ಪೈಪ್ ಅನ್ನು ಅಳವಡಿಸಿದ್ದು ಸಾರ್ವಜನಿಕರ ಸಂಚಾರಕ್ಕೆ ಸಹಕಾರಿಯಾಗಿದೆ.
ಸೇವಾ ಕಾರ್ಯದಲ್ಲಿ ಶೆಟ್ಟಿಕೊಪ್ಪ ವಲಯ ಮೇಲ್ವಿಚಾರಕ ಪಿ.ಸತೀಶ, ಶೆಟ್ಟಿಕೊಪ್ಪ ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ಪಿ.ಟಿ.ಜೇಮ್ಸ್, ಸ್ವಯಂ ಸೇವಕರಾದ ಪಿ.ಮಂಜುನಾಥ್, ಎಂ.ಪ್ರಶಾಂತ್, ಎಂ.ಬಿ.ಜೋಸ್ೆ, ಶಿಬು, ಎನ್.ಕೆ.ವಾಣಿ, ಅನುಪಮಾ, ಚಂದ್ರಿಕಾ ಹಾಗೂ ಘಟಕದ ಸಂಯೋಜಕ ಎ.ಎಸ್.ನಿದರ್ಶನ್ ಭಾಗವಹಿಸಿದ್ದರು. ಸ್ವಯಂ ಸೇವಕರ ಸೇವೆಗೆ ಶೆಟ್ಟಿಕೊಪ್ಪ ಹಾಗೂ ಕರುಗುಂದದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.