ಶ್ರೀ ಕಾಡುಗುಡಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ

HUN-DEC-8-1(NADAPPANAHALLI JATRE)
ಹುಣಸೂರು ತಾಲೂಕು ನಾಡಪ್ಪನಹಳ್ಳಿಯ ಶ್ರೀ ಕಾಡುಗುಡಿ ಮಹದೇಶ್ವರಸ್ವಾಮಿ ದೇವರ ಕಾರ್ತೀಕ ಮಾಸದ ಜಾತ್ರಾ ಮಹೋತ್ಸವದಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು.
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ನಾಡಪ್ಪನಹಳ್ಳಿಯ ಶ್ರೀ ಕಾಡುಗುಡಿ ಮಹದೇಶ್ವರಸ್ವಾಮಿ ದೇವರ ಕಾರ್ತಿಕ ಮಾಸದ ಎರಡು ದಿನಗಳ ಜಾತ್ರಾ ಮಹೋತ್ಸವವು ನೂರಾರು ಆಸ್ತಿಕರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಡಿ.4ರ ಸೋಮವಾರದಂದು ರಾತ್ರಿ 10 ಗಂಟೆಗೆ ದೇವರಿಗೆ ಹಾಲರವಿ ಸೇವೆ, ಎಣ್ಣೆಮಜ್ಜನ, ಬಾಯಿಬೀಗದ ನಂತರ ರುದ್ರಾಭಿಷೇಕ ನೆರವೇರಿಸಲಾಯಿತು. ಡಿ.5ರಂದು ಬೆಳಗ್ಗೆ ದೇವಾಲಯದ ಆವರಣದಲ್ಲಿ ಕೊಂಡೋತ್ಸವವು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಮ್ಮುಖದಲ್ಲಿ ನಡೆಯಿತು. ನಂತರ ಹರಕೆ ಹೊತ್ತವರಿಂದ ಹುಲಿವಾಹನ ಸೇವೆ, ಬಾಯಿಬೀಗ, ತಲೆಮುಡಿ ಮತ್ತು ಪಂಜಿನ ಸೇವೆ ಮಾಡಿದರು.

ಎರಡು ದಿನಗಳ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತು.್ತ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲ ಚಲ್ಲಹಳ್ಳಿ, ತಿಪ್ಪೂರು ಹೊಸಪುರ, ಹಳೇಪುರ, ಉದ್ದೂರು ಮತ್ತು ಮಹದೇವಪುರ ಗ್ರಾಮದಿಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಧನ್ಯರಾದರು. ಜಾತ್ರಾ ಮಹೋತ್ಸವದಲ್ಲಿ ದೇವಾಲಯ ಸಮಿತಿ ಟ್ರಸ್ಟ್‌ನ ಗೌರವಾಧ್ಯಕ್ಷ ನಾಡಪ್ಪನಹಳ್ಳಿಯ ಎನ್.ಸಿ.ಚೇತನ್‌ಕುಮಾರ್, ಅಧ್ಯಕ್ಷ ಹೊಸಪುರದ ಎಚ್.ಬಿ.ಮಹದೇವಪ್ಪ ಸೇರಿದಂತೆ ಸಮಿತಿ ಸದಸ್ಯರು, ಗ್ರಾಮಸ್ಥರು ಮತ್ತು ಸರ್ಕಾರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net