ಮಾ.8ರಂದು ಶ್ರೀ ಚೌಡೇಶ್ವರಿ ದೇಗುಲದಲ್ಲಿ ಶ್ರೀಧನ್ವಂತರಿ ಯಾಗ

Chowdeshwari Devastana Mondali, Chalukya Nagara Press meet
Published on

ಶಿವಮೊಗ್ಗ: ಚಾಲುಕ್ಯ ನಗರದ ಶ್ರೀಚೌಡೇಶ್ವರಿ ಅಮ್ಮನವರ ದೇವಸ್ಥಾನ ಅಭಿವೃದ್ಧಿ ಸಮಿತಿ, ಶ್ರೀಸೀತಾರಾಮಾಂಜನೇಯ ಸೇವಾ ಟ್ರಸ್ಟ್‌ವತಿಯಿಂದ ಮಾ.8 ಮತ್ತು 9ರಂದು ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಶ್ರೀಧನ್ವಂತರಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಪಿ.ಚೇತನ್ ಭಟ್ ಹೇಳಿದರು.

ಮಾ.8ರಂದು ಬೆಳಗ್ಗೆ 9ರಿಂದ ಲಸಮರ್ಪಣೆಯೊಂದಿಗೆ ಗಣಹೋಮ ಮತ್ತು ಧನ್ವಂತರಿ ಜಪ, 12.30ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ, ಸಂಜೆ 6ರಿಂದ ಕಳಸ ಸ್ಥಾಪನೆ, ಮಂಡಲಾರಾಧನೆ ಸಹಿತವಾಗಿ ಸಮಸ್ತ ಭಕ್ತರಿಂದ ಸಾಮೂಹಿಕ ಧನ್ವಂತರಿ ಜಪ, ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಂತರ ಆರ್ಯುವೇಂದದಿಂದ ಸಂಪೂರ್ಣ ಸ್ವಾಸ್ಥ ್ಯ ಕುರಿತು ಡಾ.ಚಿತ್ರಲೇಖಾ ವಿ. ಕೃಷ್ಣ ಅವರಿಂದ ಉಪನ್ಯಾಸ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

9ರಂದು ಬೆಳಗ್ಗೆ 9.30ರಿಂದ ಧನ್ವಂತರಿ ಯಾಗ ಆರಂಭವಾಗಲಿದ್ದು 11.30ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ ನಡೆಯಲಿದೆ. ಶ್ರೀ ಹಂದಲಸು ರಾಘವೇಂದ್ರ ಭಟ್ ಆಚಾರ್ಯಾತ್ವ ವಹಿಸುವರು. 11.30ರಿಂದ ಮಧ್ಯಾಹ್ನ 1ರವರೆಗೆ ಮೈಸೂರಿನ ಶ್ರೀ ಅರ್ಜುನ ಅವಧೂತ ಮಹಾರಾಜರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮುಖ್ಯ ಅತಿಥಿಯಾಗಿದ್ದು, ದೇವಸ್ಥಾನದ ಸಮಿತಿ ಅಧ್ಯಕ್ಷ ಗಂಗಾನಾಯ್ಕ ಹಾಗೂ ಟ್ರಸ್ಟ್‌ನ ಅಧ್ಯಕ್ಷೆ ಶುಭ ನರಸಿಂಹ ಮೂರ್ತಿ ಉಪಸ್ಥಿತರಿರುವರು ಎಂದರು. ಪ್ರಮುಖರಾದ ಸಿದ್ದೇಶ್ವರ, ಜಯಪ್ಪ, ಜಯಂತಿ, ಮುರಳೀಧರ್, ಶೇಷಾಗಿರಿ, ಕೆ.ಶೇಖರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net